ರಾಜ್ಯದಲ್ಲಿಇಂದು1715 ಮಂದಿಗೆ ಕೊರೊನಾ-2ಸಾವು

ಬೆಂಗಳೂರು, ಮಾ. 21- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ‌ ಅಬ್ಬರ ಮುಂದುವರೆದಿದ್ದು, 1715 ಹೊಸ ಪ್ರಕರಣಗಳು ದಾಖಲಾಗಿವೆ.ಇಂದು ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಹಾಗೂ ಬೀದರ್ನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ಆಸ್ಪತ್ರೆ ಯಿಂದ 1048 ಮಂದಿ ಬಿಡುಗಡೆ ಯಾಗಿದ್ದು, ಇದುವರೆಗೆ ಒಟ್ಟು 944256 ಮಂದಿ ಆಸ್ತತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 13493 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12,434 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 970202ಕ್ಕೆ ಏರಿಕೆಯಾಗಿದೆ. 137 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ದೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 1039 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು 782 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 417672 ಕ್ಕೆ ಏರಿಕೆಹಾಗಿದ್ದು, ಒಟ್ಟು 9300 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 403822 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಒಬ್ಬ ಸೋಂಕಿತ ಮೃತಪಟ್ಟಿದ್ದು ಇದುವರೆಗೂ ಬೆಂಗಳೂರಿನಲ್ಲಿ ಕೊರೋನಾಗೆ 4549ಬಲಿಯಾಗಿದ್ದಾರೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 01, ಬಳ್ಳಾರಿ 11, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 32, ಬೀದರ್ 61, ಚಾಮರಾಜನಗರ 04, ಚಿಕ್ಕಬಳ್ಳಾಪುರ 09, ಚಿಕ್ಕಮಗಳೂರು 05, ಚಿತ್ರದುರ್ಗ 03, ದಕ್ಷಿಣ ಕನ್ನಡ 54, ದಾವಣಗೆರೆ 08, ಧಾರವಾಡ 24, ಗದಗ 05, ಹಾಸನ 40, ಹಾವೇರಿ 01, ಕಲಬುರಗಿ 41, ಕೊಡಗು 09, ಕೋಲಾರ 10, ಕೊಪ್ಪಳ 00, ಮಂಡ್ಯ 15, ಮೈಸೂರು 70, ರಾಯಚೂರು 06, ರಾಮನಗರ 01, ಶಿವಮೊಗ್ಗ 04, ತುಮಕೂರು 38, ಉಡುಪಿ 170, ಉತ್ತರ ಕನ್ನಡ 11, ವಿಜಯಪುರ 20, ಯಾದಗಿರಿ 03.