ರಾಜ್ಯದಲ್ಲಿಂದು 7148 ಮಂದಿಗೆ ಕೋವಿಡ್‌ ಸೋಂಕು


ಬೆಂಗಳೂರು, ಅ 17 -ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7184 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದೆ

ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7. 58 ಲಕ್ಷ ತಲುಪಿದೆ. ಸದ್ಯ ರಾಜ್ಯದಲ್ಲಿ ಖಚಿತ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ.7.7ರಷ್ಟಿದ್ದು, ಮೃತರ ಸಂಖ್ಯೆ ಶೇ.0.98ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜೊತೆಗೆ, ಕಳೆದ 24 ಗಂಟೆಗಳಲ್ಲಿ 8893 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ ಸೋಂಕು ಗೆದ್ದವರ ಸಂಖ್ಯೆ 6.37 ಲಕ್ಷ ತಲುಪಿದೆ.
ಸದ್ಯ ರಾಜ್ಯದಲ್ಲಿ 1.10 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 10,427 ಮಂದಿ ಮೃತಪಟ್ಟಿದ್ದಾರೆ. 940 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 71 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಸತತ 2ನೇ ದಿನವೂ ಸುಮಾರು 7 ಸಾವಿರದಷ್ಟು ಸೋಂಕು ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು ನಗರದಲ್ಲಿ ಕೂಡ ಕಳೆದ 24 ಗಂಟೆಗಳಲ್ಲಿ 3371 ಪ್ರಕರಣಗಳು ವರದಿಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 152, ಬಳ್ಳಾರಿಯಲ್ಲಿ 189, ಬೆಳಗಾವಿಯಲ್ಲಿ 298, ಬೆಂಗಳೂರು ಗ್ರಾಮಾಂತರದಲ್ಲಿ 220, ಬೀದರ್‌ನಲ್ಲಿ 10, ಚಾಮರಾಜನಗರದಲ್ಲಿ 49, ಚಿಕ್ಕಬಳ್ಳಾಪುರದಲ್ಲಿ 124, ಚಿಕ್ಕಮಗಳೂರಿನಲ್ಲಿ 129, ಚಿತ್ರದುರ್ಗದಲ್ಲಿ 80, ದಕ್ಷಿಣ ಕನ್ನಡದಲ್ಲಿ 172, ಧಾರವಾಡದಲ್ಲಿ 99, ಗದಗದಲ್ಲಿ 49, ಹಾಸನದಲ್ಲಿ 220, ಹಾವೇರಿಯಲ್ಲಿ 61, ಕಲಬುರಗಿಯಲ್ಲಿ 40, ಕೊಡಗಿನಲ್ಲಿ 77 ಪ್ರಕರಣಗಳು ವರದಿಯಾಗಿವೆ.
ಕೋಲಾರದಲ್ಲಿ 78, ಕೊಪ್ಪಳದಲ್ಲಿ 65, ಮಂಡ್ಯದಲ್ಲಿ 192, ಮೈಸೂರಿನಲ್ಲಿ 501, ರಾಯಚೂರಿನಲ್ಲಿ 54, ರಾಮನಗರದಲ್ಲಿ 25, ಶಿವಮೊಗ್ಗದಲ್ಲಿ 129, ತುಮಕೂರಿನಲ್ಲಿ 281, ಉಡುಪಿಯಲ್ಲಿ 210, ಉತ್ತರಕನ್ನಡದಲ್ಲಿ 123, ವಿಜಯಪುರದಲ್ಲಿ 69, ಯಾದಗಿರಿಯಲ್ಲಿ 76 ಪ್ರಕರಣಗಳು ವರದಿಯಾಗಿವೆ.