ರಾಜ್ಯದಲ್ಲಿಂದು 383 ಜನರಿಗೆ ಸೋಂಕು: 4 ಸಾವು

ಬೆಂಗಳೂರು , ಫೆ. 23- -ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯತ್ತ ಸಾಗಿದೆ. ಇಂದು ರಾಜ್ಯದಲ್ಲಿ 383 ಮಂದಿಗೆ‌ ಹೊಸದಾಗಿ ಸೋಂಕು ತಗುಲಿದ್ದು, ನಾಲ್ಕು ಮಂದಿ ಸೋಂಕಿನಿಂದವಮೃತಪಟ್ಟಿದ್ದಾರೆ.
ಜಿಲ್ಲೆಗಳಲ್ಲೂ ಸಾವಿನ ಸಂಖ್ಯೆ ಇಳಿಕೆಯಾಗಿದ್ದು ಬೆಂಗಳೂರು ನಗರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಡ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ರಾಜ್ಯದಲ್ಲಿ 383 ಮಂದಿಗೆ ಸೋಂಕು ದೃಢಪಟ್ಟಿದೆ ಕಳೆದ 24 ಗಂಟೆಗಳಲ್ಲಿ 378 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಇದುವರೆಗೆ ಒಟ್ಟು930465 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ948849 ಕ್ಕೆ ಏರಿದೆ. . ರಾಜ್ಯದಲ್ಲಿ ಒಟ್ಟಾರೆ 6062 ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12303 ಜನರು ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದರೆ, 122 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಇಳಿಕೆಯತ್ತ ಸಾಗಿದ್ದು, ಕಳೆದ 24 ಗಂಟೆಗಳಲ್ಲಿ 240 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು 240 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 404183 ಕ್ಕೆ ಏರಿದೆ. ಇದುವರೆಗೂ 395344 ಜನರು ಗುಣಮುಖರಾಗಿದ್ದಾರೆ. 4380 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಬೆಂಗಳೂರಿನಲ್ಲಿ 4458 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತಿಳಿಸಿದೆ.

ಜಿಲ್ಲಾವಾರು ಸೋಂಕಿತರ ವಿವರ ಇಂತಿದೆ.

ಬಾಗಲಕೋಟೆಯಲ್ಲಿ 00,ಬಳ್ಳಾರಿ 5,ಬೆಳಗಾವಿ 10,ಬೆಂಗಳೂರು ಗ್ರಾಮಾಂತರ 04, ಬೀದರ್‌ 01, ಚಾಮರಾಜನಗರ 00, ಚಿಕ್ಕಬಳ್ಳಾಪುರ 01, ಚಿಕ್ಕಮಗಳೂರು02,, ಚಿತ್ರದುರ್ಗ 03,ದಕ್ಷಿಣ ಕನ್ನಡ 17, ದಾವಣಗೆರೆ 00, ಧಾರವಾಡ 03, ಗದಗದಲ್ಲಿ 00 ಹಾಸನದಲ್ಲಿ0 9, ಹಾವೇರಿ 01,,ಕಲಬುರಗಿ 08, ಕೊಡಗು03,, ಕೋಲಾರ 01,ಕೊಪ್ಪಳ00,,ಮಂಡ್ಯ02, ಮೈಸೂರು 26, ರಾಯಚೂರು 00, ರಾಮನಗರ 02, ಶಿವಮೊಗ್ಗ 18, ತುಮಕೂರು 12, ಉಡುಪಿ 12, ಉತ್ತರ ಕನ್ನಡ00, ವಿಜಯಪುರ 01, ಹಾಗೂ ಯಾದಗಿರಿಯಲ್ಲಿ 02 ಪ್ರಕರಣಗಳು ಪತ್ತೆಯಾಗಿವೆ ಎಂದು‌ ಆರೋಗ್ಯ ಇಲಾಖೆ ತಿಳಿಸಿದೆ.