ರಾಜ್ಯದಲ್ಲಿಂದು ಕೊರೊನಾ ಸುನಾಮಿ 25 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು, 123 ಸಾವು

ಬೆಂಗಳೂರು, ಏ.22- ರಾಜ್ಯದಲ್ಲಿ ಕರೋನ ವೈರಸ್‌ ಸುನಾಮಿ ಅಂಕೆಗೆ ಸಿಗದಂತೆ ಅಪ್ಪಳಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಸೋಂಕು ಪೀಡಿತರು ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ದಿನದಿನಕ್ಕೆ ದಾಖಲೆ ಸೃಷ್ಟಿಸಿದೆ.
ಸರ್ಕಾರದ ಬಿಗಿಕ್ರಮಗಳ ನಡುವೆಯೂ ಸೋಂಕು ಅಂಕೆಗೆ ಸಿಗದಂತೆ ಗಗನಮುಖಿಯಾಗಿರುವುದು ಜನಸಾಮಾನ್ಯರು ಆತಂಕದಿಂದ ದಿನದೂಡುವಂತಾಗಿದೆ.
ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡ ನಂತರ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವುದು ರಾಜ್ಯದ ಮಟ್ಟಿಗೆ ದಾಖಲೆ.
ಪ್ರತಿದಿನ ಸೋಂಕಿತರ ಸಂಖ್ಯೆ ಸಾವಿರಗಟ್ಟಲೆ ಏರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಆರ್ಭಟ ಹೇಳತೀರದಾಗಿದೆ. ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇಂದು 15 ಸಾವಿರ ಗಡಿ ದಾಟಿದ
ರಾಜ್ಯದಲ್ಲಿ ಕಳೆದ24 ಗಂಟೆಗಳಲ್ಲಿ 123 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರ ಒಂದರಲ್ಲೇ ಇಂದು 68 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಲ್ಬುರ್ಗಿಯಲ್ಲಿ 11 ಮಂದಿ, ತುಮಕೂರು, ಧಾರವಾಡ ಮತ್ತು ಬಳ್ಳಾರಿಯಲ್ಲಿತಲಾ ಐದು ಮಂದಿ ಸೋಂಕಿತರು, ಹಾಸನ ಮಂಡ್ಯ, ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಾಲ್ವರು ಸೊಂಕಿತರು, ಬೀದರ್ ಮತ್ತು ಮೈಸೂರಿನಲ್ಲಿ ತಲಾ ಮೂವರು ಬಾಗಲಕೋಟೆ, ಚಿಕ್ಕಬಳ್ಳಾಪುರ ಕೊಡಗು , ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರು ಬೆಳಗಾವಿ, ಶಿವಮೊಗ್ಗ ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ ಇಂದು ಒಂದು ಲಕ್ಷ 96 ಸಾವಿರ ದಾಟಿದೆ. ಇಂದು ರಾಜ್ಯದಲ್ಲಿ 25795 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು5624 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 123 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1247997ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟ 1037857 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 196236 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13885 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 243ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 15244ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 598919ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಸೊಂಕಿಗೆ 68 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 5450ಕ್ಕೆ ಏರಿಕೆಯಾಗಿದೆ.
ಇಂದು 2257 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ 455655 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು 137813 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 134, ಬಳ್ಳಾರಿ 940, ಬೆಳಗಾವಿ 255, ಬೆಂಗಳೂರು ಗ್ರಾಮಾಂತರ 405, ಬೀದರ್ 396, ಚಾಮರಾಜನಗರ 271, ಚಿಕ್ಕಬಳ್ಳಾಪುರ 329, ಚಿಕ್ಕಮಗಳೂರು 146, ಚಿತ್ರದುರ್ಗ 142, ದಕ್ಷಿಣ ಕನ್ನಡ 474, ದಾವಣಗೆರೆ 157, ಧಾರವಾಡ 361, ಗದಗ 73, ಹಾಸನ 689, ಹಾವೇರಿ 46, ಕಲಬುರಗಿ 659, ಕೊಡಗು 156, ಕೋಲಾರ 587, ಕೊಪ್ಪಳ 121, ಮಂಡ್ಯ 385, ಮೈಸೂರ 818, ರಾಯಚೂರು 433, ರಾಮನಗರ 260, ಶಿವಮೊಗ್ಗ 207, ತುಮಕೂರು 1231, ಉಡುಪಿ 274, ಉತ್ತರ ಕನ್ನಡ 163, ವಿಜಯಪುರ 328, ಯಾದಗಿರಿ 111.