ರಾಜ್ಯಗಳಿಗೆ 125 ಕೋಟಿ ಲಸಿಕೆ ಪೂರೈಕೆ

ನವದೆಹಲಿ, ನ.೧೮- ದೇಶದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೂ ೧೨೮ ಕೋಟಿಗೂ ಅಧಿಕ ಡೋಸ್ ಕೊರೋನಾ ಸೋಂಕು ತಡೆ ಕುರಿತ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಿರುವ ಲಸಿಕೆಯ ಪೈಕಿ ಇನ್ನೂ ಬಳಕೆಯಾಗದ ೨೨.೪೫ ಕೋಟಿ ಡೋಸ್ ಲಸಿಕೆ ಉಳಿದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನಿನ್ನೆ ಸಂಜೆಯತನಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆಯಾಗಿ ೧೨೮,೪೯,೮೬,೩೪೦ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಈ ಪೈಕಿ ಇನ್ನೂ ಬಳಕೆಯಾಗದೆ.೨೨,೪೫,೫೩,೫೬೧ ಡೋಸ್ ಲಸಿಕೆ ಬಾಕಿ ಉಳಿದಿದೆ ಅದನ್ನು ಅರ್ಹ ನಾಗರಿಕರಿಗೆ ನೀಡುವಂತೆ ಸೂಚನೆ ನೀಡಿರುವುದಾಗಿ ಹೇಳಿದೆ.
ದೇಶದಲ್ಲಿ ನಿನ್ನೆ ಸಂಜೆಯತನಕ ೧೧೪ ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚು ಮಾಡಲಾಗುತ್ತಿದೆ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ನಾಗರಿಕರಿಗೆ ಲಸಿಕೆ ನೀಡುವ ಉದ್ದೇಶ ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ಹೇಳಿದೆ.
ಜನವರಿ ೧೬ರಿಂದ ಲಸಿಕೆ ಆರಂಭವಾಗಿ ಜೂನ್ ತಿಂಗಳಿನಿಂದ ಸಾರ್ವತ್ರಿಕವಾಗಿ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದೆ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡುತ್ತಿದೆ.
ಔಷಧ ತಯಾರಿಕಾ ಸಂಸ್ಥೆಗಳು ಉತ್ಪಾದನೆ ಮಾಡುವ ಲಸಿಕೆಯ ಪೈಕಿ ಶೇಕಡ ೭೫ ರಷ್ಟನ್ನು ಕೇಂದ್ರ ಸರ್ಕಾರ ಖರೀದಿ ಮಾಡುತ್ತಿದ್ದು ಇನ್ನೂ ಶೇಕಡ ೨೫ರಷ್ಟು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಅವಕಾಶ ಮಾಡಿಕೊಡಲಾಗಿದೆ.