ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮಿಡಿಸಿವಿರ್

ಬೆಂಗಳೂರು, ಮೇ ೧೬- ಕೊರೊನಾ ಸೋಂಕು ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ ೧೭ ರಿಂದ ೨೩ ರ ವರೆಗೆ ರಾಜ್ಯಕ್ಕೆ ೪.೨೫ ಲಕ್ಷ ವಯಲ್ಸ್ ಚುಚ್ಚುಮದ್ದು ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.
ಮಹಾರಾಷ್ಟ್ರದ ಬಳಿಕ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರೆಮಿಡಿಸಿವಿರ್ ಹಂಚಿಕೆ ಮಾಡಲಾಗಿದೆ. ರಾಜ್ಯಗಳಲ್ಲಿರುವ ಸಕ್ರಿಯ ಪ್ರಕರಣಗಳನ್ನು ಆಧರಿಸಿ ರೆಮಿಡಿಸಿವಿರ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ
ಏಪ್ರಿಲ್ ೨೧ರಿಂದ ಇದುವರೆಗೆ ೭೬ ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಲಾಗಿದ್ದು ರಾಜ್ಯದ ಪಾಲು ೧೦ ಲಕ್ಷ ದಷ್ಡಿ ಇದೆ ಎಂದು ಅವರು ಹೇಳಿದ್ದಾರೆ.
ವಿವಿಧ ರಾಜ್ಯಗಳಿಗೆ ರೆಮಿಡಿಸಿವಿರ್ ಹಂಚಿಕೆ ಮಾಡಿರುವ ಕುರಿತು ಟ್ವಿಟರ್ ನಲ್ಲಿ ವಿಷಯ ಪ್ರಕಟಿಸಿರುವ ಅವರು ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಮೇ ೧೭ರಿಂದ ಮೇ ೨೩ರವರೆಗಿನ ಬಳಕೆಗಾಗಿ ೨೩ ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಿದೆ ಎಂದು ಹೇಳಿದ್ದಾರೆ
ದೇಶದ ಎಲ್ಲ ರಾಜ್ಯಗಳಿಗೆ ರೆಮಿಡಿಸಿವಿರ್ ಹಂಚಿಕೆ ಮಾಡಲಾಗಿದ್ದು ದೆಹಲಿಗೆ ೨.೮ ಲಕ್ಷ, ಕರ್ನಾಟಕ ಕ್ಕೆ ೧೦ ಲಕ್ಷ,, ಆಂಧ್ರ ಪ್ರದೇಶಕ್ಕೆ ೩.೭೫ ಲಕ್ಷ, ವಿಹಾರಕ್ಕೆ ೨ಲಕ್ಷ, ಕೇರಳಕ್ಕೆ ೨.೭೫ ಲಕ್ಷ, ಮಹಾರಾಷ್ಟ್ರಕ್ಕೆ ೧೪.೯೨ ಲಕ್ಷ ಉತ್ತರ ಪ್ರದೇಶಕ್ಕೆ ೬.೨೫ ಲಕ್ಷ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಇಲ್ಲಿಯತನಕ ೭೬ ೭೬ ಲಕ್ಷಕ್ಕೂ ಅಧಿಕ ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ;