ರಾಜ್ಯಕ್ಕೆ 1.64 ಲಕ್ಷ ಡೋಸ್ ಕೋವಾಕ್ಸಿನ್ ಪೂರೈಕೆ

ಬೆಂಗಳೂರು,ಮೇ.31- ಕೇಂದ್ರ ಸರ್ಕಾರದಿಂದ ಇಂದು ರಾಜ್ಯಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ

ಇದುವರೆಗೆ ರಾಜ್ಯಕ್ಕೆ ಒಟ್ಟಾರೆ ಕೋವ್ಯಾಕ್ಸಿನ್ 17.8 ಲಕ್ಷ ಡೋಸ್ ಪೂರೈಕೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ತಿಳಿಸಿದ್ದಾರೆ .

ಈ ಕುರಿತು ಟ್ವೀಟ್ ಮಾಡಿರುವ ಅವರು‌ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪೂರೈಕೆ ಯಾಗಿರುವ ಲಸಿಕೆಯ ಪೈಕಿ 15.86 ಲಕ್ಷ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಬಂದಿದೆ ಇನ್ನುಳಿದ 1.94 ಲಕ್ಷ ಡೋಸ್ ಲಸಿಕೆಯನ್ನು ಹೇಳಿದ್ದಾರೆ ಸರ್ಕಾರದ ನೇರವಾಗಿ ಖರೀದಿ ಮಾಡಿದೆ ಎಂದು ಅವರು ಹೇಳಿದ್ದಾರೆ

ರಾಜ್ಯದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯಕ್ಕೆ ಬಂದಿರುವ ಲಸಿಕೆಯನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.