ರಾಜ್ಯಕ್ಕೆ ೧೩.೯೦ ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ

ನವದೆಹಲಿ, ಜ.೧೧- ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆಸ್ಟ್ರಾ ಝೆನೆಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಕರ್ನಾಟಕ್ಕೆ ೧೩.೯೦ ಲಕ್ಷ ಡೋಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಇಲ್ಲವೇ ನಾಳೆ ಒಳಗೆ ಭಾರತೀಯ ಸೆರಂ ಸಂಸ್ಥೆಯಿಂದ ಲಸಿಕೆಯನ್ನು ಸ್ವೀಕಾರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಕೋವಿ ಶೀಲ್ಡ್ ಲಸಿಕೆ ರಾಜ್ಯಕ್ಕೆ ಆಗಮಿಸಲಿದೆ ಆ ಬಳಿಕ ಕೋವ್ಯಾಕ್ಸಿನ್ ಲಸಿಕೆಯು ಬರಲಿದೆ ಎಂದು ಲಸಿಕೆ ಕಾರ್ಯಕ್ರಮದ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್ ತಿಳಿಸಿದ್ದಾರೆ.

ಲಸಿಕೆ ರಾಜ್ಯಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ಲಸಿಕೆ ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಲಸಿಕೆ ಸಂಗ್ರಹಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಇನ್ನಷ್ಟು ಸೌಲಭ್ಯಗಳನ್ನು ಮಾಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಲಸಿಕೆ ಆಗಮಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ತಿಂಗಳಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಲಸಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಲಾಗಿದೆ ಮುಂದಿನ ಎರಡು ತಿಂಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ

ಬೆಂಗಳೂರುನಲ್ಲಿ ೧೧.೩೫ ಲಕ್ಷ ಡೋಸ್ ಮತ್ತು ಬೆಳಗಾವಿಯಲ್ಲಿ ೨.೫ ಲಕ್ಷ ಡೋಸ್ ಲಸಿಕೆ ಸಂಗ್ರಹ ಮಾಡುವ ವ್ಯವಸ್ಥೆ ಮಾಡಲಾಗಿದ್ದು ಸಂಗ್ರಹ ಕೇಂದ್ರದಿಂದ ಎಲ್ಲೆಡೆ ಲಸಿಕೆಯನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಬೆಳಗಾವಿ ಲಸಿಕಾ ಕೇಂದ್ರ ಇಂದ ಭಾಗದ ೮ ಜಿಲ್ಲೆಗಳಿಗೆ ಅನಿಸಿಕೆಯನ್ನು ವಿತರಣೆ ಮಾಡಲಾಗುವುದು ಬೆಂಗಳೂರು ಕೇಂದ್ರದಿಂದ ೨೨ ಜಿಲ್ಲೆಗಳಿಗೆ ಲಸಿಕೆ ವಿತರಣೆ ಮಾಡಲು ಸರಕಾರ ಉದ್ದೇಶಿಸಿದೆ