ರಾಜ್ಯಕ್ಕೆ ನಮೋ ಭೇಟಿ-ಕಾರ್ಯಕರ್ತರಿಗೆ ಟಾನಿಕ್

ಕೋಲಾರ, ಸೆ,5-ರಾಜ್ಯದ ಜನತೆಯ ಪಲ್ಸ್ ನೋಡಿದಾಗ ಬಿಜೆಪಿಯತ್ತ ಸಿಕ್ಕಾಪಟ್ಟೆ ಒಲವು ಇರುವುದು ಕಂಡು ಬರುತ್ತಿದೆ. ಇದನ್ನು ಇಮ್ಮಡಿಗೊಳಿಸುವ ದಿಸೆಯಲ್ಲಿ ತಿಂಗಳಿಗೊಮ್ಮೆ ಕರ್ನಾಟಕ ರಾಜ್ಯಕ್ಕೆ ಬೇಟಿ ನೀಡುವುದಾಗಿ ಪ್ರಧಾನಿ ನಮೋ ನೀಡಿದ ಭರವಸೆಯು ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರಲ್ಲಿ ಪುಲ್ ಖುಷ್ ತಂದಿದೆ.
ಮಂಗಳೂರಿನ ಗೋಲ್ಡ್ ಫಿಂಚ್‌ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶಿಸ್ತು ಬದ್ದವಾಗಿ ಆಯೋಜಿಸದ್ದ ಸಭೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡೆಸಿ ಕಾರ್ಯಕ್ರಮದ ಆಯೋಜಕರಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್ ಅವರಿಗೆ ಶಬ್ಬಾಸ್‌ಗಿರಿ ನೀಡಿದ ನಮೋ ಪ್ರತಿ ತಿಂಗಳಿಗೊಮ್ಮೆ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುವ ಘೋಷಣೆಯಿಂದ ನಮೋ ಅವರನ್ನು ರಾಜ್ಯದ ಪ್ರತಿ ಜಿಲ್ಲೆಗೂ ಕರೆ ತರುವ ಯೋಜನೆಗಳು ಬಿಜೆಪಿ ನಾಯಕರಲ್ಲಿ ರೂಪುಗೊಳ್ಳುತ್ತಿದೆ.
ಕೋರ್ ಸಮಿತಿಯಲ್ಲಿನ ಪ್ರಧಾನಿ ನಮೋ ಬಿಜೆಪಿ ನಾಯಕರಿಗೆ ಉತ್ಸಾಹದ ಟಾನಿಕ್ ನೀಡಿರುವ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಯನ್ನು ಚುನಾವಣೆಯನ್ನು ಸುಲಭವಾಗಿ ಎದುರಿಸ ಬಹುದೆಂಬ ಆತ್ಮವಿಶ್ವಾಸ, ಹುಮ್ಮಸ್ಸು ಕೇಸರಿ ಪಡೆಯಲ್ಲಿ ಇಮ್ಮಡಿ ಗೊಂಡಿದೆ.
ವಿಭಾಗ ಮಟ್ಟದಲ್ಲಿ ಕಂದಾಯ ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಾವೇಶಗಳನ್ನು ಆಯೋಜಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವ ಮೂಲಕ ನಾಡಿಮೀಡಿತವನ್ನು ಅರ್ಥೈಸಿ ಕೊಳ್ಳಬೇಕೆಂದು ಮುಖಂಡರಿಗೆ ಕಿವಿ ಮಾತು ತಿಳಿಸಲಾಗಿದೆ.
ಸಾರ್ವಜನಿಕ ಚುನಾವಣೆಗಳ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಮಂದಿ ಸೇರುವುದು ಸಾಮಾನ್ಯದ ಸಂಗತಿಯಾಗಿದೆ ಅದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರುವುದು ವಿಶೇಷವಾಗಿದ್ದು ರಾಜ್ಯದ ಜನತೆಯು ಮುಂದಿನ ಚುನಾವಣೆಯ ದಿಕ್ಕೂಚಿಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಉಳಿಸಿ, ಬೆಳೆಸಿ ಕೊಂಡು ಹೋಗುವುದು ರಾಜ್ಯ ಬಿಜೆಪಿ ನಾಯಕರ ಮೇಲಿದೆ ಎಂದು ಸೂಚಿಸಲಾಗಿದೆ. .
ಬಿಜೆಪಿ ಪರವಾಗಿ ಇರುವ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿ ಕೊಳ್ಳುವುದು ಬಿಜೆಪಿ ಪರ ಸೆಳೆದು ಕೊಳ್ಳುವುದು ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರ ಹೊಣೆಯಾಗಿದೆ ಈಗಿನಿಂದಲೇ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ವಿಶ್ವಾಸಕ್ಕೆ ಪಡೆಯ ಬೇಕು ಬಿಜೆಪಿಯ ಸಂಘಟನೆಯಲ್ಲಿನ ಭಿನ್ನಮತಗಳನ್ನು ಶಮನಗೊಳಿಸಿ ಒಗ್ಗಟ್ಟನ್ನು ಪ್ರದರ್ಶಿಸ ಬೇಕು
ಬಿಜೆಪಿಯ ಮೇಲೆ ಇರುವಂತ ಶೇ ೪೦ ಕಮೀಷನ್, ಸಾಲುಸಾಲು ಹತ್ಯೆ. ಹಿಜಾಬ್, ಪಠ್ಯ ಪುಸ್ತಕಗಳ ವಿವಾದ ಸೇರಿದಂತೆ ಅನೇಕ ವಿವಾದಗಳು ಧ್ವನಿಯು ದಿನೇ,ದಿನೇ ಕ್ಷೀಣಿಸುತ್ತಿದ್ದು, ಕಾಂಗ್ರೇಸ್ ಪಕ್ಷವು ತನ್ನ ವರ್ಚಸ್ಸು ಕಳೆದು ಕೊಳ್ಳುತ್ತಿದೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಗುಂಪುಗಾರಿಕೆಗಳು ಜಿಲ್ಲಾ ಮಟ್ಟದಲ್ಲೂ ವೈಭವೀಕರಿಸುತ್ತಾ ಸಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಪ್ರಧಾನಿ ನಮೋ ಅವರ ರಾಜ್ಯ ಪ್ರವಾಸವು ರಾಜ್ಯದ ಬಿಜೆಪಿಗೆ ಆನೆ ಬಲ ತಂದು ಕೊಟ್ಟಿದೆ.
ಜಿಲ್ಲಾ ಮಟ್ಟದಲ್ಲಿ ಹೇಳುವುದಾದರೆ ಶತ್ರು ಶತ್ರುವಿನ ಮಿತ್ರ ಎಂಬ ಮಾತಿನಂತೆ ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಮತವು ಬಿಜೆಪಿ ಪಕ್ಷಕ್ಕೆ ವರವಾಗಿ ಪರಿಣಾಮಿಸಿದ್ದು ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಲೋಕ ಸಭಾ ಚುನಾವಣೆಯಲ್ಲಿ ಎಸ್. ಮುನಿಸ್ವಾಮಿ ಅವರ ಗೆಲುವೆ ಕಾರಣವಾಗಿದೆ. ಎಸ್.ಮುನಿಸ್ವಾಮಿಯವರ ಹುಮ್ಮಸ್ಸು ಕಾರ್ಯಕರ್ತರಲ್ಲಿ ಉತ್ಸಹದ ಚಿಲುಮೆಯ ಬಗ್ಗೆ ಹರಿದಿದೆ.
ನಮೋ ಅವರು ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡವ ಘೋಷಣೆಯ ಜೂತೆಗೆ ಸಂಸದ ಮುನಿಸ್ವಾಮಿಯವರ ಹಲವಾರು ದಾಖಲೆಗಳ ಸರದಾರನಾಗಿದ್ದು ಬೃಹತ್ ರಾಷ್ಟ್ರ ಧ್ವಜದ ದಾಖಲೆ ಬಗ್ಗೆ ಪ್ರಧಾನಿ ನಮೋ ಅವರಿಂದ ಶ್ಲಾಘನೆಗೆ ಭಜನರಾಗಿದ್ದಾರೆ. ಮುಂದಿನ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಹೊರೆಸಲಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಸಂಖ್ಯೆ ಹೆಚ್ಚಾಗಿದ್ದು ರಾಜ್ಯದಲ್ಲಿ ಎರಡನೇ ಸ್ಥಾನಪಡೆದಿರುವ ಹಿನ್ನಲೆಯಲ್ಲಿ ಮೀಸಲಾತಿಗೆ ಅಧೀನಕ್ಕೆ ಒಳ ಪಟ್ಟಿದೆ. ಅದೇ ರೀತಿ ಜಿಲ್ಲೆಯ ೬ ತಾಲ್ಲೂಕುಗಳ ಪೈಕಿ ೩ ವಿಧಾನಸಭಾ ಕ್ಷೇತ್ರಗಳು ಮೀಸಲಾತಿಗೆ ಸೇರ್ಪಡೆಯಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯ ಮಟ್ಟದ ಎಸ್.ಸಿ. ವಿಭಾಗದ ಪ್ರಶಿಕ್ಷಣ ವರ್ಗದ ಶಿಬಿರವನ್ನು ಮೂರು ದಿನಗಳ ಆಯೋಜಿಸಿದ್ದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅನೇಕ ನಾಯಕರು ಅಗಮಿಸಿದ್ದು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ಸುಗೊಳ್ಳಲು ಪ್ರಮುಖ ಪಾತ್ರವಹಿಸಿದ ಸಂಸದ ಎಸ್.ಮುನಿಸ್ವಾಮಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.