ರಾಜ್ಯಕ್ಕೂ ಕಾಲಿರಿಸಿದ ಓಮಿಕ್ರಾನ್ ಭೀತಿ: ಹೆಚ್ಚಿದ ಆತಂಕ

ಬೆಂಗಳೂರು, ನ.29- ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದ ಇಬ್ಬರು ಪ್ರಯಾಣಿಕರ ಪೈಕಿ ಓರ್ವ ಮಂದಿಗೆ ಡೆಲ್ಟಾ ರೂಪಾಂತರ ಸೋಂಕು ಇರುವುದು ಪತ್ತೆಯಾಗಿದೆ.‌ ಇ‌ದರಿಂದಾಗಿ ಓಮಿಕ್ರಾನ್ ಸೋಂಕಿನ ಭೀತಿ ಎದುರಾಗಿದೆ.

ದಕ್ಷಿಣ ಆಫ್ರಿಕಾದಿಂದ ಅಗಮಿಸಿರುವ ಇಬ್ಬ ಪೈಕಿ ಒಬ್ಬರಿಗೆ ಡೆಲ್ಟಾ ಸೋಂಕು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಆದರ ಅದು ಓಮಿಕ್ರಾನ್ ಸೋಂಕೋ ಅಥವಾ ಇಲ್ಲವೆ ಎನ್ನುವುದನ್ನು ಖಚಿತ ಪಡಿಸಿಲ್ಲ. ಜೊತೆಗೆ ಈ ಸಂಬಂದ ಕೇಂದ್ರ ಸರ್ಕಾರ‌ ಅಥವಾ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಜೊತೆ ಸಂಪರ್ಕ ದಲ್ಲಿ ಇದ್ದಾರೆಯೋ ಅಥವಾ ಇಲ್ಲವೇ ಎನ್ನುವುದನ್ನು ಅವರು ಖಚಿತ ಪಡಿಸಿಲ್ಲ.

63 ವೃರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ. ಆ ವ್ಯಕ್ತಿ ಯಾರು ಎನ್ನುವುದು ಸೇರಿದಂತೆ ಸದ್ಯಕ್ಕೆ ವಿವರವಾದ ಮಾಹಿತಿ ನೀಡಲು ಸಾದ್ಯವಿಲ್ಲ. ಡೆಲ್ಟಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಪರೀಶೀಲನೆ ನಡೆಸಲಾಗುತ್ರಿದೆ. ವರದಿ ಬಂದ ಆ ನಂತರವಷ್ಟೇ ಯಾವುದು ಎನ್ನುವುದು ತಿಳಿಯಲಿದೆ ಎಂದಿದ್ದಾರೆ.

ಹೀಗಾಗಿ ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ‌ ವಿವಿಧ ಭಾಗಗಳಲ್ಲಿ ತಲ್ಲಣ ಮೂಡಿಸಿರುವ ಓಮಿಕ್ರಾನ್ ಸೋಂಕೋ ಅಥವಾ ಇಲ್ಲವೇ ಎನ್ನುವುದು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

ಭಾರತೀತ ವೈದ್ಯಕೀಯ ಸಂಶೋಧನಾ ಮಂಡಳಿಯ ಜೊತೆ ಸಂಪರ್ಕದಲ್ಲಿದ್ದು ಅಲ್ಲಿಂದ ಅವರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದ್ದಾರೆ.