ರಾಜೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಸಿಂಗೆಗೆ ಸನ್ಮಾನ

ಅಫಜಲಪುರ:ನ.17: ವರದಿಗಾರರಾಗಿ ಹಾಗೂ ತಾಲೂಕು ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಹುಮುಖ ಪ್ರತಿಭೆ ಡಾ.ಸಂಗಣ್ಣ ಎಂ ಸಿಂಗೆ ಆನೂರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಹಿರಿಯ ವರದಿಗಾರ ಶಿವಾನಂದ ಹಸರಗುಂಡಗಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಡಾ.ಸಂಗಣ್ಣ ಅವರು ಉಪನ್ಯಾಸಕರಾಗಿ, ಕಾಲೇಜೊಂದರೆ ಪ್ರಾಚಾರ್ಯರಾಗಿ, ಸಾಹಿತ್ಯ ಕ್ಷೇತ್ರ, ಮಾದ್ಯಮ ಕ್ಷೇತ್ರ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತಿರುವ ಡಾ.ಸಿಂಗೆ ಅವರಿಗೆ ಪ್ರಶಸ್ತಿ ಲಭಿಸಿರುವುದು ಬಹಳ ಖುಷಿ ತಂದಿದೆ ಎಂದ ಅವರು ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬರಲೆಂದು ಹಾರೈಸುವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಕೀಲ್ ಚೌಧರಿ,ಪತ್ರಕರ್ತರಾದ ಗುಂಡುರಾವ್ ಅಫಜಲಪುರ, ಸಿದ್ದು ಶಿವಣಗಿ,ಅರುಣ ಹೂಗಾರ, ಮಲ್ಲಿಕಾರ್ಜುನ ಹಿರೇಮಠ,ಅಶೋಕ ಕಲ್ಲೂರ,ರಾಹುಲ್ ದೊಡ್ಮನಿ ಇದ್ದರು.