ರಾಜೋತ್ಸವ ಪ್ರಶಸ್ತಿಗೆ ರಾವೂರ ಬಾಳಿ ಆಯ್ಕೆ

ವಾಡಿ:ನ.21: ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದ ಬೋಧಕ ಸಿದ್ದಲಿಂಗ ಬಾಳಿ ಅವರನ್ನು ನ.22 ರಂದು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಹತ್ತು ಹಲವು ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ, ಈ ಭಾಗದಲ್ಲಿ ಕ್ರೀಯಾಶೀಲರಾಗಿರುವ ಬಾಳಿ ಅವರಿಗೆ ಈ ಪ್ರಶಸ್ತಿ ಲಭಿಸುತ್ತಿದೆ. ರವಿವಾರ 22 ರಂದು ಕಲಬುರಗಿಯ ಕಲಾಮಂಡಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ, ಚೆಂಬರ ಆಫ್ ಕಾಮರ್ಸನ ಜಂಟಿ ಕಾರ್ಯದರ್ಶಿ ರವಿಕುಮಾರ ಸರಸಂಬಿ, ಮಹೇಶ ಹೊಸೂರಕರ್, ಹಣಮಂತರಾಯ ದೊಡ್ಡಮನಿ, ಉಪಸ್ಥಿತರಿರುವರೆಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಹೆಚ್.ನಿರಗುಡಿ ತಿಳಿಸಿದ್ದಾರೆ.