ರಾಜೇಂದ್ರ ಕುಮಾರ್ ಅವರ ೯೬ ನೇ ಹುಟ್ಟುಹಬ್ಬ: ೩೫ ಸೂಪರ್ ಹಿಟ್ ಫಿಲ್ಮ್ ಗಳನ್ನು ನೀಡಿದರೂ ನಂತರ ಕೆಟ್ಟ ದಿನಗಳಲ್ಲಿ ರಾಜೇಶ್ ಖನ್ನಾರಿಗೆ ಮನೆಯನ್ನು ಮಾರಬೇಕಾದ ಸ್ಥಿತಿ ಬಂದಿತು

ಅರುವತ್ತು ಎಪ್ಪತ್ತರ ದಶಕದಲ್ಲಿ ೩೫ ರಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರೂ ನಂತರ ಕೆಟ್ಟ ದಿನಗಳಲ್ಲಿ ರಾಜೇಶ್ ಖನ್ನಾರಿಗೆ ತನ್ನ ಮನೆಯನ್ನು ಮಾರಬೇಕಾದ ದುಸ್ಥಿತಿ ಆಗಿನ ಸೂಪರ್ ಸ್ಟಾರ್ ರಾಜೇಂದ್ರ ಕುಮಾರ್ ಅವರಿಗೆ ಬಂದಿತ್ತು! ಬಾಲಿವುಡ್ ಅಂದರೆ ಹೀಗೆನೆ.
೧೯೬೦ ರ ದಶಕದಲ್ಲಿ, ಚಿತ್ರಮಂದಿರಗಳಲ್ಲಿ ಬೆಳ್ಳಿ ಅಥವಾ ಸುವರ್ಣ ಮಹೋತ್ಸವವನ್ನು ಆಚರಿಸಿದ ಸುಮಾರು ಹನ್ನೆರಡಕ್ಕೂ ಹೆಚ್ಚು ಚಲನಚಿತ್ರಗಳನ್ನು ಸತತವಾಗಿ ಆಚರಿಸಿದ ಒಬ್ಬ ನಾಯಕನಿದ್ದನು. ಅಭಿಮಾನಿಗಳು ಆ ನಟನಿಗೆ ಜುಬಿಲಿ ಕುಮಾರ್ ಎಂದು ಹೆಸರಿಟ್ಟರು. ಅವರ ನಿಜವಾದ ಹೆಸರು ರಾಜೇಂದ್ರ ಕುಮಾರ್.


ತನ್ನ ೮೦ ರಷ್ಟು ವೃತ್ತಿಜೀವನದ ಚಲನಚಿತ್ರಗಳಲ್ಲಿ, ೩೫ ಅಂತಹ ಸೂಪರ್ ಹಿಟ್ ಫಿಲ್ಮ್ ಗಳಾಗಿವೆ. ಈ ಫಿಲ್ಮ್ ಗಳು ೨೫ ರಿಂದ ೫೦ ವಾರಗಳವರೆಗೆ ಚಿತ್ರಮಂದಿರಗಳಲ್ಲಿ ಓಡುತ್ತಲೇ ಇತ್ತು. ರಾಜೇಂದ್ರ ಕುಮಾರ್ ಅವರ ಚಿತ್ರಗಳು ಎಂದರೆ ಯಶಸ್ಸಿನ ಗ್ಯಾರಂಟಿ ಎಂದು ಆವಾಗ ಪರಿಗಣಿಸಲಾಗಿತ್ತು. ರಾಜೇಶ್ ಖನ್ನಾ ಆಗಮನದ ಮೊದಲು ರಾಜೇಂದ್ರ ಕುಮಾರ್ ಅವರೇ ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ನಟರಾಗಿದ್ದರು. ಅವರು ಜನಿಸಿದ್ದು ೨೦ ಜುಲೈ ೧೯೨೭ .( ನಿಧನ- ೧೨ ಜುಲೈ ೧೯೯೯),
ಆರಂಭದಲ್ಲಿ ಸಣ್ಣ ಪಾತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಜೇಂದ್ರ ಕುಮಾರ್ ಅವರು ಕೆಲವು ಚಿತ್ರಗಳ ನಂತರ ನಿರ್ಮಾಪಕ-ನಿರ್ದೇಶಕರ ಮೊದಲ ಆಯ್ಕೆಯಾದರು.ಅವಿಭಜಿತ ಭಾರತದ ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ರಾಜೇಂದ್ರ ಕುಮಾರ್ ವಿಭಜನೆಯ ನಂತರ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ತೆರಳಿದರು. ಬಡತನದ ಆ ಯುಗದಿಂದ ನಂತರ ಎಷ್ಟು ಯಶಸ್ಸಿನ ಹಂತವನ್ನು ತಲುಪಿದರು ಎಂದರೆ ಹೋರಾಟದ ದಿನಗಳಲ್ಲಿ ಅವರು ಮುಸಾಫಿರ್ ಖಾನಾದಲ್ಲಿನ ಯಾವ ಮಂಚದಲ್ಲಿ ಮಲಗುತ್ತಿದ್ದರೋ ಆ ಮಂಚವೂ ನಂತರ ಪ್ರಸಿದ್ಧವಾಯಿತು .ಮತ್ತು ಜನರು ಅದರ ಮೇಲೆ ಮಲಗಲು ಹೆಚ್ಚಿನ ಹಣವನ್ನು ಪಾವತಿಸಲು ಪ್ರಾರಂಭಿಸಿದ್ದರು!
ಆದರೆ, ಉತ್ತುಂಗಕ್ಕೇರಿದ ತಾರೆ ಮುಂದೆ ಹಾಗೆಯೇ ನೆಲಕಚ್ಚಿದರು ಮತ್ತು ಅವರ ಕೊನೆಯ ದಿನಗಳಲ್ಲಿ ಅವರು ತುಂಬಾ ಕೆಟ್ಟ ಸಮಯವನ್ನು ಕಂಡರು. ಎರಡು ಡಜನ್‌ಗಿಂತಲೂ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ ನಂತರ ಅವರು ತಮ್ಮ ನೆಚ್ಚಿನ ಬಂಗಲೆಯನ್ನು ರಾಜೇಶ್ ಖನ್ನಾರಿಗೆ ಮಾರಾಟ ಮಾಡಬೇಕಾಯಿತು.
ಜನರು ಆ ಬಂಗಲೆಯನ್ನು ಭೂತ ಬಂಗಲೆ ಎಂದು ಕರೆಯುತ್ತಿದ್ದರು ಮತ್ತು ಯಾರೂ ಅದನ್ನು ಖರೀದಿಸಲು ಸಿದ್ಧರಿರಲಿಲ್ಲ. ಆಗ ರಾಜೇಂದ್ರ ಕುಮಾರ್ ಖರೀದಿಸಿದ್ದರು. ಈ ಬಂಗಲೆ ಅವರ ಅದೃಷ್ಟವನ್ನು ಬದಲಾಯಿಸಿದೆ ಎಂದು ಆವಾಗ ಜನರು ಹೇಳುತ್ತಿದ್ದರು.
ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ೨೦ ಜುಲೈ ೧೯೨೭ ರಂದು ಜನಿಸಿದ ರಾಜೇಂದ್ರ ಕುಮಾರ್ ಅವರ ತಂದೆ ಪ್ರಮುಖ ಜವಳಿ ವ್ಯಾಪಾರಿ ಮತ್ತು ಅಜ್ಜ ಮಿಲಿಟರಿ ಗುತ್ತಿಗೆದಾರರಾಗಿದ್ದರು. ಭಾರತ-ಪಾಕಿಸ್ತಾನ ವಿಭಜನೆಯು ಅವರ ಕುಟುಂಬದಿಂದ ಎಲ್ಲವನ್ನೂ ಕಿತ್ತುಕೊಂಡರೂ ರೈಸ್ ಕುಟುಂಬದಲ್ಲಿ ಅವರ ಜೀವನವು ಸುಗಮವಾಗಿ ಸಾಗುತ್ತಿತ್ತು. ಗಲಭೆಗಳ ನಡುವೆ ವ್ಯಾಪಾರ ಕುಸಿದು ಇಡೀ ಕುಟುಂಬ ಎಲ್ಲವನ್ನು ಬಿಟ್ಟು ಭಾರತಕ್ಕೆ ತೆರಳಬೇಕಾಯಿತು. ದೆಹಲಿಯಲ್ಲಿ ನೆಲೆಸುವುದು ಸೂಕ್ತ ಎಂದು ಕುಟುಂಬ ಭಾವಿಸಿತು.


ದೆಹಲಿಯಲ್ಲಿ ರಾಜೇಂದ್ರ ಕುಮಾರ್ ಪೋಲೀಸ್ ಇಲಾಖೆಗೆ ಸೇರಲು ತಯಾರಿ ನಡೆಸಿದ್ದರು, ಆದರೆ ಇದ್ದಕ್ಕಿದ್ದಂತೆ ಒಂದು ದಿನ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಹಗಲಿರುಳು ಸಿನಿಮಾ ನೋಡುತ್ತಿದ್ದ ರಾಜೇಂದ್ರ ಕುಮಾರ್, ಸಿನಿಮಾ ಲೋಕದಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ, ಪೊಲೀಸ್ ನೌಕರಿ ಬಿಟ್ಟು ಸಿನಿಮಾಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಜೇಬಿನಲ್ಲಿ ಹಣವಾಗಲೀ, ದೆಹಲಿಯಿಂದ ಮುಂಬೈಗೆ ಹೋಗಲು ಯಾವುದೇ ಸಹಾಯವಾಗಲೀ ಇರಲಿಲ್ಲ. ಹೀಗೆ ಆಲೋಚಿಸುತ್ತಾ ತಂದೆ ಕೊಟ್ಟಿದ್ದ ಮಣಿಕಟ್ಟಿನಲ್ಲಿ ಕಟ್ಟಿದ್ದ ಬೆಲೆಬಾಳುವ ಗಡಿಯಾರದ ಮೇಲೆ ಕಣ್ಣು ಬಿತ್ತು.
ರಾಜೇಂದ್ರ ಕುಮಾರ್ ಅವರ ಆ ಗಡಿಯಾರವು ಅವರ ಸಮಯವನ್ನು ಬದಲಾಯಿಸಲು ಸಹಕರಿಸಿತು. ಆ ವಾಚ್ ನ್ನು ರೂ.೬೩ಕ್ಕೆ ಮಾರಿದರು. ೧೩ ರೂಪಾಯಿಗೆ ಬಾಂಬೆಗೆ ಟಿಕೆಟ್ ಖರೀದಿಸಿ ೫೦ ರೂಪಾಯಿಯನ್ನು ಜೇಬಿನಲ್ಲಿ ಇಟ್ಟುಕೊಂಡು ಹೊರಟರು.
ದೆಹಲಿಯಿಂದ ಮುಂಬೈಗೆ ಬಂದಿದ್ದ ರಾಜೇಂದ್ರ ಕುಮಾರ್ ಬಾಂಬೆ ಗೆಸ್ಟ್ ಹೌಸ್ ನಲ್ಲಿ ಕಡಿಮೆ ವೆಚ್ಚದಲ್ಲಿ ಮಲಗಲು ಸಿಗುವ ಮಂಚಗಳನ್ನು ಒದಗಿಸುವ ಕೊಠಡಿಗೆ ಬಂದು ಒಂದರಲ್ಲಿ ತಂಗಿದ್ದರು.


ಧರ್ಮೇಂದ್ರ, ರಾಜ್ ಕುಮಾರ್ ಮುಂತಾದ ತಾರೆಯರು ಹೋರಾಟದ ದಿನಗಳಲ್ಲಿ ತಂಗಿದ್ದು ಇದೇ ಅತಿಥಿ ಗೃಹ. ಕೆಲವು ವರ್ಷಗಳ ನಂತರ ರಾಜೇಂದ್ರ ಕುಮಾರ್ ಕೂಡಾ ಸ್ಟಾರ್ ಆದ ಮೇಲೆ ಈ ಗೆಸ್ಟ್ ಹೌಸ್ ನವರು ಆ ಕಾಟ್- ಮಂಚವನ್ನು ಫೇಮಸ್ ಮಾಡಿದರು. ಅತಿಥಿಗೃಹಕ್ಕೆ ಹೋಗುವವರಿಗೆ ರಾಜೇಂದ್ರ ಸಾಹೇಬರು ಮಲಗುತ್ತಿದ್ದ ಮಂಚ ಇದಾಗಿದೆ ಎಂದು ಹೇಳಲು ಶುರುಮಾಡಿದರು. ಇದನ್ನು ಕೇಳಿದ ಜನರು ದುಪ್ಪಟ್ಟು ಬೆಲೆಗೆ ಆ ಮಂಚದ ಮೇಲೆ ಮಲಗಲು ಸಿದ್ಧರಾಗುತ್ತಿದ್ದರು..
ಸರಿ, ಮುಂಬೈ ತಲುಪಿದಾಗ ರಾಜೇಂದ್ರ ಕುಮಾರ್ ಅವರು ಹೀರೋ ಆಗಲು ಯೋಗ್ಯರಲ್ಲ ಎಂದು ಅವರಿಗೆ ಅನಿಸಿತು. ಸ್ವಲ್ಪ ಸಮಯದ ನಂತರ ಗೀತರಚನೆಕಾರ ರಾಜೇಂದ್ರ ಕೃಷ್ಣನ್ ಅವರು ರಾಜೇಂದ್ರಕುಮಾರ್ ರನ್ನು ನಿರ್ದೇಶಕ ಎಚ್.ಎಸ್. ರಾವೈಲ್ ಬಳಿ ತಿಂಗಳಿಗೆ ರೂ.೧೫೦ ಸಂಬಳದಲ್ಲಿ ಸಹಾಯಕನ ಕೆಲಸ ತೆಗೆಸಿಕೊಟ್ಟರು. ಪತಂಗ, ಸಗಾಯ್, ಪಾಕೆಟ್ ಮಾರ್ ಮುಂತಾದ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರೂ ನಿರ್ದೇಶಕ ಎಚ್.ಎಸ್. ರಾವೈಲ್ ಹೀರೋ ಆಗುವ ಕೌಶಲ್ಯ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದರು. ಅವರು ಮೊದಲು ರಾಜೇಂದ್ರ ಕುಮಾರ್ ಅವರಿಗೆ ಪತಂಗ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ನೀಡಿದರು. ಇದನ್ನು ನೋಡಿದ ಇತರ ನಿರ್ದೇಶಕರು ಕೂಡ ಅವರಿಗೆ ತಮ್ಮ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನೀಡಲಾರಂಭಿಸಿದರು.


ನಿರ್ದೇಶಕ ಕೇದಾರ್ ಶರ್ಮಾ ಅವರು ದಿಲೀಪ್ ಕುಮಾರ್ ಮತ್ತು ನರ್ಗೀಸ್ ಜೊತೆಗೆ ೧೯೪೯- ೧೯೫೦ ರ ಜೋಗನ್ ಚಲನಚಿತ್ರದಲ್ಲಿ ರಾಜೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಿದರು. ಚಿತ್ರ ಬಿಡುಗಡೆಯಾದಾಗ, ರಾಜೇಂದ್ರ ಕುಮಾರ್ ಅವರ ಸಣ್ಣ ಪಾತ್ರವು ನಿರ್ಮಾಪಕ ದೇವೇಂದ್ರ ಗೋಯಲ್ ಸೇರಿದಂತೆ ಎಲ್ಲರ ಗಮನ ಸೆಳೆಯಿತು. ಅವರ ಪ್ರತಿಭೆಯನ್ನು ಪರೀಕ್ಷಿಸಿದ ದೇವೇಂದ್ರ, ವಚನ್ (೧೯೫೫) ಚಿತ್ರದೊಂದಿಗೆ ಅವರನ್ನು ಪ್ರಾರಂಭಿಸಿದರು. ಈ ಚಿತ್ರಕ್ಕಾಗಿ ಅವರು ಕೇವಲ ೧೫೦೦ ರೂ.ಪಡೆದಿದ್ದರು
ಸ್ವಲ್ಪ ಸಮಯದ ನಂತರ, ಅವರು ದೆಹಲಿಯ ತನ್ನ ಮನೆಗೆ ಹಿಂದಿರುಗಿದಾಗ, ಕುಟುಂಬ ಸದಸ್ಯರು ಬೇರೆ ಹುಡುಗಿಯನ್ನು ಇಷ್ಟಪಟ್ಟಿರುವುದನ್ನು ನೋಡಿದರು. ಮನೆಯವರ ಆಯ್ಕೆಯನ್ನು ಗೌರವಯುತವಾಗಿ ನಿರಾಕರಿಸಿದ ಅವರು ಈಗಾಗಲೇ ಒಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಅದೇ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದರು. ಯಶಸ್ಸನ್ನು ಸಾಧಿಸಿದ ನಂತರ, ಕುಟುಂಬದ ಆಶೀರ್ವಾದದೊಂದಿಗೆ ರಾಜೇಂದ್ರ ಕುಮಾರ್ ಹಿಂದಿ ಚಿತ್ರರಂಗದ ಬಹಲ್ ಕುಟುಂಬಕ್ಕೆ ಸೇರಿದ ಶುಕ್ಲಾ ಕುಮಾರರನ್ನು ವಿವಾಹವಾದರು. ಅವರು ರಮೇಶ್ ಬೆಹ್ಲ್ ಮತ್ತು ಶ್ಯಾಮ್ ಬೆಹ್ಲ್ ಅವರ ಸಹೋದರಿ ಮತ್ತು ಗೋಲ್ಡಿ ಬೆಹ್ಲ್ ಅವರ ಚಿಕ್ಕಮ್ಮ. ಈ ಮದುವೆಯಿಂದ ಅವರಿಗೆ ಕುಮಾರ್ ಗೌರವ್ ಎಂಬ ಮಗ ಮತ್ತು ಕಾಜಲ್ ಮತ್ತು ಡಿಂಪಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
ರಾಜೇಂದ್ರ ಕುಮಾರ್ ಅವರ ವೃತ್ತಿಜೀವನವು ಅವನತಿ ಹೊಂದಿದ್ದು ೭೦ ರ ದಶಕದ ವಿಷಯ. ರಾಜೇಶ್ ಖನ್ನಾ ಬಂದ ಮೇಲೆ ಅವರ ಸ್ಟಾರ್ ಡಮ್ ಕಳೆಗುಂದಿತ್ತು. ಅವರ ವೃತ್ತಿಜೀವನಕ್ಕೆ ಬ್ರೇಕ್ ಬಿದ್ದ ಕಾರಣ, ಅವರು ತಮ್ಮ ಮನೆಯಿಂದ ಹೊರಹೋಗುವುದನ್ನು ಸಹ ಆ ನಂತರ ನಿಲ್ಲಿಸಿದ್ದರು.