ರಾಜೂರ:  ಮಹಿಳಾ ದಿನಾಚರಣೆ   

 ಸಂಜೆವಾಣಿ ವಾರ್ತೆ     ಕುಕನೂರು, ಮಾ.17: ತಾಲೂಕಿನ   ರಾಜೂರ್. ಗ್ರಾಮದಲ್ಲಿ  ಶ್ರೀ ಕಲ್ಲಿನಾಥೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.   ಒಕ್ಕೂಟದ ಅಧ್ಯಕ್ಷರಾದ ಸೈದಾಬಿ ಮರ್ತುಜಾ ಸಾಬ್ ಕಲ್ಲೂರ್ ಮತ್ತು ಕಾರ್ಯದರ್ಶಿ ಶ್ರೀಮತಿ ಅನ್ನಪೂರ್ಣ ಪ್ರಭು ಮುತ್ತಾಳ ಮತ್ತು ಖಜಾಂಚಿ  ಪದ್ಮಾ ಚಂದ್ರಪ್ಪ ರಾಜೂರು ಎಲ್ಲ ಪದಾಧಿಕಾರಿಗಳು ಹಾಗೂ ತಾಲೂಕು ವಲಯ ಮಟ್ಟದ ಅಧಿಕಾರಿಗಳಾದ ಉದಯ್ ಕುಮಾರ್ ಸರ್ ಮತ್ತು ಕ್ಲಸ್ಟರ್ ಸೂಪರ್ ವೈಸರ್ ಆದ ಪೂಜಾ ಮೇಡಂ ಹಾಗೂ ಸ್ವಸಹಾಯ ಸಂಘದ ಸದಸ್ಯರು ಎಂಬಿಕೆ ಎಲ್ ಸಿ ಆರ್ ಪಿ ಪಶು ಸಖಿ ಹಾಗೂ ಕೃಷಿ ಸಖಿ ಅಂಗನವಾಡಿ ಕಾರ್ಯಕರ್ತೆ ಯರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು