ರಾಜೂರು: ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಮನವಿ

ಕುಕನೂರು, ಡಿ.26 : ತಾಲ್ಲೂಕಿನ ರಾಜೂರು ಗ್ರಾಮದ ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಗ್ರಾಮದ ರೈತರು ತಹಶೀಲ್ದಾರ ಕಿರಣಕುಮಾರ ಕುಲಕರ್ಣಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗದಗ- ವಾಡಿ ರೈಲ್ವೆ ಕಾಮಗಾರಿ ಪ್ರಾರಂಭವಾಗಿದ್ದು, ರಾಜೂರು ಗ್ರಾಮದ ಪಶ್ಚಿಮ ಭಾಗದ ಯರೆ ಜಮೀನುಗಳಿಗೆ ಹೋಗಲು ರೈಲ್ವೆ ಇಲಾಖೆಯಿಂದ ಚಿಕೇನಕೊಪ್ಪ ಮತ್ತು ತೊಂಡಿಹಾಳ ರಸ್ತೆಯಿಂದ ನಮ್ಮ ಜಮೀನುಗಳಿಗೆ ಹೋಗಲು ಮೇಲೆ ಹೇಳಿದ ನಮ್ಮ ಜಮೀನುಗಳಿಗೆ ಈ ಹಿಂದೆ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ನಮ್ಮ ಹೋರಾಟ ನಿರಂತರ 6 ತಿಂಗಳಿಂದ ನಡೆದಿದ್ದು, ಮನವಿಗೆ ಯಾರೂ ಸ್ಪಂದಿಸದೇ ಇರುವುದರಿಂದ ಗ್ರಾಮದ ಸಮಸ್ತ ರೈತ ಬಾಂಧವರು ಆಕ್ರೋಶಗೊಂಡು, ದಿ. ಜ. 5 ರಂದು ರಾಜೂರು ಗ್ರಾಮದಲ್ಲಿ ಅನಿರ್ದಿಷ್ಟ ಕಾಲ ರಸ್ತಾ ರೋಕೋ ಚಳುವಳಿ ಮಾಡಲಾಗುವುದು ಎಂದು ಗ್ರಾಮದ ಜನತೆ ತಹಶೀಲ್ದಾರರಲ್ಲಿ ಮನವಿ ಮಾಡಿದರು.
ಶರಣಪ್ಪ ಮಂಡಲಗಿರಿ, ಬೀಮರಡ್ಡೇಪ್ಪ ಮಾದಿನೂರು, ಸಂಗಪ್ಪ ಅಂಗಡಿ, ಶರಣಪ್ಪ ಅರಕೇರಿ, ಮಲ್ಲಪ್ಪ ಗುಡ್ಲಾನೂರು, ಶರಣಪ್ಪ ಮುಂಡರಗಿ, ಕಲ್ಲಪ್ಪ ಅಂಗಡಿ, ಬಸವರಾಜ ಕಲ್ಗುಡಿ, ದೇವಪ್ಪ ಉಪ್ಪಾರ, ಗೊಲ್ಲಪ್ಪ ಅಂಗಡಿ, ಈರಣ್ಣ ರಡ್ಡೇರ, ಅಂದಪ್ಪ ಹಳ್ಳಿಗುಡಿ, ಚನ್ನಬಸಪ್ಪ ಹಳ್ಳಿಗುಡಿ, ಮುದಿಯಪ್ಪ ಕವಲೂರು, ಬಸರಡ್ಡೇಪ್ಪ ಸೋಂಪುರು ಇನ್ನಿತರರು ಇದ್ದರು.
ಪೋಟೋ;03ಕುಕನೂರಿನ ತಹಶೀಲ್ದಾರ ಕಛೇರಿಯಲ್ಲಿ ಗುರುವಾರ ರಾಜೂರು ಗ್ರಾಮದ