ರಾಜೂರು ಗ್ರಾಮಸ್ಥರಿಗೆ ಅಭಿವೃದ್ಧಿ ಜಾಗೃತಿ ಗೊತ್ತಿಲ್ಲ ಶಾಸಕ ವಿಷಾದ

ಕುಕನೂರು,ನ.20- ಕೃಷ್ಣಾ ನದಿ ನೀರನ್ನು ರಾಜೂರು, ದ್ಯಾಂಪೂರ ಮತ್ತು ಬೆಣಕಲ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಅವರು ಗುರುವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ರಾಜೂರು ಗ್ರಾಮದ 99.83 ಲಕ್ಷ ರೂ. ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರಸ್ತುತ ಕಾಮಗಾರಿಯಲ್ಲಿ ಜನರು ಮುಂದೆ ನಿಂತು ರಸ್ತೆ , ಚರಂಡಿ ಮುಂತಾದ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿಕೊಳ್ಳಲು ಮುಂದಾಗಬೇಕೆಂದು ಜತೆಗೆ ತಾವು ಚುನಾವಣೆ ಮುಂಚೆ ನೀಡಿದ ಭರವಸೆಯಂತೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತವಾಗಿ ಮಾಡಲಾಗುತ್ತದೆ, ಬರುವ ದಿನಗಳಲ್ಲಿ ಎಂದು ನುಡಿದರು. ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಿರಿಯ ಎಂಜಿನಿಯರ್ ಗಿರೀಶ ಮಾತನಾಡಿ, ರಾಜೂರು ಗ್ರಾಮದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಸಾರ್ವಜನಿಕರು ಊರಿನ ಹಿತಕ್ಕಾಗಿ ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಗಂಗಮ್ಮ ಗುಳಗಣ್ಣವರ್ ,ಎನ್.ಎಚ್. ಎಇಇ ಕೃಷ್ಣಮೂರ್ತಿ, ಮುಖಂಡರಾದ ಹುಬ್ಬಳ್ಳಿ ವೀರಣ್ಣ, ಸಿ.ಎಚ್.ಪಾಟೀಲ್ , ಧರ್ಮಣ್ಣ ಮಂಡಲಗಿರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.