ರಾಜು ಕಡ್ಯಾಳರವರ ‘ಭುಜಬಲ’ ಕೃತಿ ಬಿಡುಗಡೆಗೊಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಬೀದರ:ಎ.17: ಜೆಡಿಎಸ್ ಮುಖಂಡರಾದ ರಾಜು ಕಡ್ಯಾಳರವರು ರಚಿಸಿದ ಕೃತಿ ‘ಭುಜಬಲ’ವನ್ನು ಮಾಜಿ ಮುಖ್ಯಮಂತ್ರಿಗಳು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪುರ್ ರವರು ಬಿಡುಗಡೆಗೊಳಿಸಿದರು.
ತಾಲೂಕಿನ ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭುಜಬಲ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿರವರು, ರಾಜು ಕಡ್ಯಾಳರವರು ಉತ್ತಮ ಬರಹಗಾರರಾಗಿದ್ದಾರೆ. ಅವರು ಬರೆದಿರುವ ಈ ಕೃತಿ ಉತ್ತಮ ಕೃತಿಯಾಗಿದ್ದು, ನಾಡಿನ ಓದುಗರಿಗೆ ಇಷ್ಟವಾಗುವ ಕೃತಿಯಾಗಿದೆ. ಇನ್ನೂ ಹೆಚ್ಚಿನ ಪುಸ್ತಕಗಳನ್ನು ರಾಜು ಕಡ್ಯಾಳರವರು ಹೊರ ತರಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ರಾಜು ಕಡ್ಯಾಳರವರು ನಮ್ಮ ಪಕ್ಷದ ಮುಖಂಡರು. ಅವರು ರಚಿಸಿರುವ ಕೃತಿ ಉತ್ತಮ ಕೃತಿಯಾಗಿದೆ. ಈ ಕೃತಿಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿದ್ದಾರೆ. ‘ಭುಜಬಲ’ ಎಂಬ ಪುಸ್ತಕದ ಮೂಲಕ ಅವರು ಬರೆದಿರುವ ಅನೇಕ ಲೇಖನಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
ಈ ಸಂದರ್ಭದಲ್ಲಿ ಲೇಖಕ ರಾಜು ಕಡ್ಯಾಳ, ಪ್ರಸಾದ್ ಮನ್ನಳ್ಳಿ, ಸಂಜುಕುಮಾರ್ ಬೇಂದ್ರೆ, ಯೇಶಪ್ಪ ಬೇಮಳಖೇಡ, ಶಿವಕುಮಾರ್ ಸಿಂದೋಲ್, ದಯಾ ಕಡ್ಯಾಳ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಪುಸ್ತಕ ಪ್ರೇಮಿಗಳು ಸೇರಿದಂತೆ ಅನೇಕರಿದ್ದರು.