ರಾಜುಗೌಡ ಸೇವಾ ಸಮಿತಿಗೆ 51,000 ರೂ.ಗಳ ದೇಣಿಗೆ

ಹುಣಸಗಿ,ಮೇ.- ಮಹಾಮಾರಿ ಕೊರೊನಾ ಸೋಂಕಿತರ ಸೇವೆಗಾಗಿ ಮತ್ತು ಕೋವಿಡ್ ವೈರಸ್ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜುಗೌಡ ಸೇವಾ ಸಮಿತಿಗೆ 51,000 ದೇಣಿಗೆಯನ್ನು ದೇವಪುರ ಶ್ರೀಗಳು ನೀಡಿ ಇಲ್ಲಿನ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.
ಸೇವಾ ಕಾರ್ಯದಲ್ಲಿ ತೊಡಗಿರುವ ರಾಜುಗೌಡ ಸೇವಾ ಸಮಿತಿಯ ಕೆಲಸಕ್ಕೆ ಕೈಜೊಡಿಸಲು, ಪೂಜ್ಯ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಜಡೆ ಶಂಕರಲಿಂಗೇಶ್ವರ ಸಂಸ್ಥಾನಮಠ ದೇವಪುರ ಹಾಗೂ ಬೃಹನ್ಮಠ ಬಬಲಾದಿ ಸ್ಟೇಷನ್ ಕಲಬುರ್ಗಿ ಇವರ ಸಮ್ಮುಖದಲ್ಲಿ ರಾಜುಗೌಡ ಸೇವಾ ಸಮಿತಿಗೆ ಈ ದೇಣಿಗೆಯನ್ನು ನೀಡಲಾಯಿತು.
ರಾಜುಗೌಡ ಸೇವಾ ಸಮಿತಿಯಿಂದ ಕೋವಿಡ್ ರೋಗಿಗಳ ಸೇವೆ, ಅವರಿಗೆ ಯೋಗಾಸನ ಮಾಡಿಸುವುದು ಮತ್ತು ಕಷಾಯ ಕೊಡುವುದು ಮೊಳಕೆ ಕಾಳು ಕೊಡುತ್ತಿರುವುದು ತುಂಬ ಸಂತಸದ ವಿಷಯ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು.
ಕೊರೊನಾ ವಾರಿಯರ್ಸಗಳಾದ ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ ಮತ್ತು ವೈದ್ಯಾಧಿಕಾರಿಗಳಿಗೆ ಮತ್ತು ರಾಜುಗೌಡ ಸೇವಾ ಸಮಿತಿಗೆ ಶ್ರೀಗಳು ಅಭಿನಂದನೆಯನ್ನು ಸಲ್ಲಿಸಿದರು.