ರಾಜೀವ್ ಗಾಂಧಿ ಯುವಕರಿಗೆ ಆದರ್ಶ

ಹರಿಹರ.ಮೇ.೨೨; ಯುವಕರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆದರ್ಶವಾಗಿದ್ದರು ದೇಶದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವರ್ಧನೆ, 18 ವಯಸ್ಸಿನವರಿಗೆ ಮತದಾನದ ಹಕ್ಕು, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್‌ ನಲ್ಲಿ ಕ್ರಾಂತಿ ಮಾಡಿದ್ದರು. ಇಂದಿಗೂ ಅವರ ಕೊಡುಗೆಯನ್ನು ದೇಶದ ಯುವ ಜನತೆ ನೆನಪಿಸಿ ಕೊಳ್ಳುತ್ತಾರೆಎಂದು ಹರಿಹರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ ಹೇಳಿದರು.ಅವರು  ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್‌ ಗಾಂಧಿ 32 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆಡಳಿತ ಶೈಲಿ, ಬಡ ಜನರ ಕಾಳಜಿ ನಮಗೆಲ್ಲ ಪ್ರೇರಣೆಯಂತಿವೆ ಎಂದರು. ಮಲೇಬೆನ್ನುರು ಬ್ಲಾಕ್ ಅದ್ಯಕ್ಷ ಎಂ.ಬಿ.ಅಬಿದ್ಅಲಿ ಮಾತನಾಡಿ, ರಾಜೀವ ಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಭಾರತದ ಫಾದರ್‌ ಆಫ್‌ ಐಟಿ ಮತ್ತು ಟೆಲಿಕಮ್ಯುನಿಕೇಷನ್‌ ಕ್ರಾಂತಿ ಹರಿಕಾರ ಎಂದು ಕರೆಯಲಾಗುತ್ತದೆ ಎಂದರು.ಪುಣ್ಯ ಸ್ಮರಣೆ ಕಾರ್ಯಕ್ರಮ ದಲ್ಲಿ ಹರಿಹರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಲ್.ಬಿ.ಹನುಮಂತಪ್ಪ. ನಗರ ಸಬೆ ಸದಸ್ಯ ಸೈಯದ್ ಅಲಿಂ,ಮುಖಂಡರಾದ ಹಬಿಬ್ ಬೇಗೆ.ದಾದಾಪಿರ್.ಗಿರಣೆ ರಮೇಶ್. ಕೊಟ್ರೆಶ್ ನಾಯಕ್.ಅಬ್ದುಲ್ಲಾ. ನಸರೊಲ್ಲಾ.ಬಸುವರಾಜ್  ಯುವ ಕಾಂಗ್ರೆಸ್ ಶಾಲೋ,ಯಮನೂರು.ಜಫರ್ ಸಾಧಿಕ್.ವಾಸಿಂ ಇದ್ದರು.