ರಾಜೀವ್ ಗಾಂಧಿ ಪುಣ್ಯಸ್ಮರಣೆ: ಕಾಂಗ್ರೆಸ್ ಪಕ್ಷದಿಂದ ಫುಡ್ ವಿತರಣೆ

ಅರಕೇರಾ.ಮೇ೨೨-ಕೊರೋನಾ ಸೋಂಕು ಬಡವರಿಗೆ ಅಕ್ಷರಶಃ ಶಾಪವಾಗಿ ಪರಿಣಮಿಸಿದೆ ದುಡಿಯುವ ವರ್ಗದ ಕೈಗಳನ್ನು ಕಟ್ಟಿ ಹಾಕಿದ್ದು ಅಲ್ಲದೆ ಅವರ ಜೀವದ ಜೊತೆ ಚೆಲ್ಲಾಟವಾಟುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿಯನ್ನು ಅರಿತು ನಮ್ಮ ಕೈಲಾದಷ್ಟು ಬಡ ಜನರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ನೆರವಾಗಲು ಸಂಕಲ್ಪ ಮಾಡಿದೇವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀದೇವಿ ಆರ್.ನಾಯಕ ಹೇಳಿದರು.
ಅವರು ಅರಕೇರಾದ ಅಂಬೇಡ್ಕರ್ ಭವನದ ಆವರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸಿ ಮಾತನಾಡಿದರು. ಕೊರೋನಾ ಸೋಂಕು ಅತಿ ವೇಗದಲ್ಲಿ ಗ್ರಾಮೀಣಾ ಪ್ರದೇಶದಲ್ಲಿ ದಾಳಿ ಮಾಡಿದ್ದು ಬಡ ಜನರ ಬದುಕನ್ನು ಕಟ್ಟಿ ಹಾಕಿದೆ. ದಿನ ನಿತ್ಯ ಕೂಲಿ ನಾಲಿ ಮಾಡಿ ಜೀವನ ದುಡುತ್ತಿರುವ ಜನರ ಜೀವ ಹಿಂಡುತ್ತಿದೆ. ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಅದಕ್ಕಾಗಿ ನಮ್ಮ ಕೈಲಾದಷ್ಟು ಬಡವರ ಸೇವೆ ಮಾಡಲು ಮುಂದಾಗಿದ್ದೇವೆ. ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಊಟದ ಪಾಕೇಟು ಹಾಗೂ ಮಾಸ್ಕ್ ಕೂಲಿ ಕಾರ್ಮಿಕರಿಗೆ ಒಂದು ದಿನದ ಕೂಲಿ ಹಣವನ್ನು ವಿತರಣೆಮಾಡಿದರು.
ನಂತರ ಹಿರಿಯ ಮುಖಂಡ ಚನ್ನವೀರಯ್ಯಸ್ವಾಮಿ ಹಿರೇಮಠ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ವೇಳೆ ಮಹೇಶ ಸ್ವಾಮಿ ಜಾಗಟಗಲ್, ಅಹ್ಮದ್ ಬಡಿಗೇರ್, ಕೆ.ಹೊಳೆಪ್ಪ, ಯಕ್ಬಲ್ ಸಾಬ್, ನಾಗರಾಜ ದೇವರಮನಿ, ಭಗವಂತ್ರಾಯ, ರಾಜುನಾಯಕ, ಬಸವರಾಜ ಮರಕಮದಿನ್ನಿ, ಸಿದ್ದಪ್ಪ ನಾಯಕ, ಮಹ್ಮದ ರಫೀ ಸಿರವಾರ, ತಿಮ್ಮಣ್ಣ, ರಮೇಶ್,ಶರಣು ಹೆಗ್ಗಡದಿನ್ನಿ, ನಾಗು, ಅಭಿಷೇಕ್ ಪೂಜಾರಿ, ರಮೇಶ್, ಭೀಮು, ಗುಂಡಪ್ಪ, ಅಮರೇಶ್ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.