
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.31: ಕಳೆದ 70 ವರ್ಷಗಳಿಂದ ನಗರದ 34 ನೇ ವಾರ್ಡಿನ ರಾಜೀವಗಾಂಧಿ ನಗರದ 2.5 ಎಕರೆ ಖಾಸಗೀ ಜಮೀನಿನಲ್ಲಿ ವಾಸ ಮಾಡಿದ್ದ ಜನರ ಕನಸು ಈಗ ನನಸಾಗಿದೆ.
ಈ ನಗರದ ಮುಖಂಡರುಗಳಾದ ಕಟ್ಟೆಸ್ವಾಮಿ, ನಾರಾಯಣ, ಶಿವರಾಮ್, ಬಸವರಾಜ್, ಎಲ್.ಬಾಬು, ಕಾಳಪ್ಪ, ಜರೀನಾ ಬೇಗಂ, ಗಂಗ ಮಾಳಮ್ಮ, ಅಂಬಮ್ಮ, ಹುಲಿಗೆಮ್ಮ ಮೊದಲಾದವರು ಇಂದು ಸುದ್ದಿಗೋಷ್ಟಿ ನಡೆಸಿ.ಆಗಷ್ಟನಲ್ಲಿ
ಸಚಿವ ಶ್ರೀರಾಮುಲು ಮನವಿ ಮಾಡಿತ್ತು. ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ.
ತಮ್ಮ ರಾಜಿವಗಾಂಧಿ ನಗರವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದ ಜಿಲ್ಲಾಡಳಿತ ಮತ್ತು ಇದಕ್ಕೆ ಸಹಕಾರ ನೀಡಿದ ಸಚಿವ ಶ್ರೀರಾಮುಲು ಅವರಿಗೆ ಧನ್ಯವಾದ ಹೇಳಿದರು.
ನಮ್ಮ ಪ್ರದೇಶದ ಜನರಿಗೆ ಪಟ್ಟ ನೀಡಿಲ್ಲ. ನೀಡುವವರೆಗೆ ನಾವು ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಬ್ಯಾನರ್ ಹಾಕಿದ್ದರು ಇಲ್ಲಿನ ಜನರು. ಇದನ್ನು ಮನಗಂಡು ಸಚಿವ ಶ್ರೀರಾಮುಲು ಇಲ್ಲಿಗೆ ಆಗಮಿಸಿ, ಕೊಳಚೆ ಪ್ರದೇಶದ ಘೋಷಣೆ ಮಾಡಿಸಿದ್ದಾರೆಂದು ಆದೇಶದ ಪ್ರತಿಯನ್ನು ನಾರಾಯಣ ಅವರು ನೀಡಿದರು.
ನಮ್ಮ ಭರವಶೆ ಈಡೇರಿಸಿರುವುದರಿಂದ ನಾವು ಈ ಬಾರಿ ಬಿಜೆಪಿಗೆ ಓಟು ಕೊಡುತ್ತೇವೆ ಎಂದು ಮಹಿಳೆಯರು ಹೇಳಿದರು.
ಕಾಂಗ್ರೆಸ್ ಗೆ ಹೊಡೆತ:
ಅಂದಾಜು 2 ಸಾವಿರ ಮತಗಳನ್ನು ಹೊಂದಿರುವ ಈ ಪ್ರದೇಶದಲ್ಲಿನ. ಈ ಬೆಳವಣಿಗೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ರಾಜಕೀಯ ಬೇಡ;
2018 ರಲ್ಲಿ ನಾಗೇಂದ್ರ ಅವರು ಚುನಾವಣೆ ವೇಳೆ ಭರವಶೆ ಕೊಟ್ಟಿದ್ದರು. 2019 ರಲ್ಲಿ ಮತ್ತೆ ಮನವಿ ಮಾಡಿತ್ತು ಆದರೆ ಮಾಡಲಿಲ್ಲ.
ಇದರಲ್ಲಿ ರಾಜಕೀಯ ಇಲ್ಲ.
ನಾನು ಒಬ್ಬ ಹೋರಾಟಗಾರ,
ಇದರಲ್ಲಿ ರಾಜಕೀಯ ಬೆರಸುವುದು ಬೇಡ. ನಮ್ಮ ಪ್ರದೇಶದ ಜನರ ಆಶಯಗಳಿಗಾಗಿ ನಾನು ಹೋರಾಟ ಮಾಡುತ್ತಿರುವೆ.
ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ಮಾಡಿತ್ತು. ಅವರು ಮಾಡಲಿಲ್ಲ. 2018 ರ ಚುನಾವಣೆಯಲ್ಲಿ ನಾಗೇಂದ್ರ ಅವರು ನಮಗೆಲ್ಲ ಪಟ್ಟಾ ಮಾಡುವುದಾಗಿ ಭರವಶೆ ನೀಡಿದ್ದರು, ಕಳೆದ ಪಾಲಿಕೆ ಚುನಾವಣೆಯಲ್ಲಿ ಸಹ ಭರವಶೆ ನೀಡಿದ್ದರು, ನಮ್ಮ ವಾರ್ಡಿನ ಕೌನ್ಸಿಲರ್ ರಾಜೇಶ್ವರಿ ಅವರು ಮೇಯರ್ ಆದರು ಮಾಡಲಿಲ್ಲ.
ಈಗ ಶ್ರೀರಾಮುಲು ಅವರು ಬಂದು ಭರವಶೆ ನೀಡಿ, ಇದನ್ನು ಜಿಲ್ಲಾಧಿಕಾರಿಗಳಿಂದ ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿಸಿದ್ದಾರೆ. ಇನ್ನು ಮುಂದೆ ಪಟ್ಟಾ ನೀಡುವುದಾಗಿ ಹೆರಳಿದ್ದರಿಂದ ನಾನು ಮತ್ತು ನಮ್ಮ ಪ್ರದೇಶದ ಜನತೆ ಬಿಜೆಪಿ ಸೇರಿದ್ದೇವೆ ಹೊರತು. ಶಾಸಕ ನಾಗೇಂದ್ರ ಅವರು ಹೇಳಿರುವಂತೆ ಹೆದರಿಸಿ, ಬೆದರಿಸಿ ಅಲ್ಲ ಎಂದರು.
ನಾಗೇಂದ್ರ, ಎರ್ರಿಸ್ವಾಮಿ ಅವರು ಈಗಲೂ ನಮ್ಮ ಸ್ನೇಹಿತರು, ಅಣ್ಣನವರು ಇದ್ದಹಾಗೆ. ಆದರೆ ಇಲ್ಲಿನ ಜನ ನಿರ್ಣಯದಂತೆ ನಾನು ನಾಯಕತ್ವವಹಿಸಿಕೊಂಡಿರುವೆ ಅಷ್ಟೇ. ಯಾವುದೇ ಕಾರಣಕ್ಕೆ ಮತ್ತೆ ನಾನು ಕಾಂಗ್ರೆಸ್ ಬೆಂಬಲಿಸುವ ಪ್ರಶ್ನೆ ಬರಲ್ಲ ಎಂದರು.