ರಾಜೀವ್ ಗಾಂಧಿ ಆಶಯವನ್ನು ಸಾಕಾರಗೊಳಿಸಿದ್ದು ಬಿಜೆಪಿ ಪಕ್ಷ

ತಿ.ನರಸೀಪುರ. ಡಿ.04:- ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಆಶಯವನ್ನು ಸಾಕಾರಗೊಳಿಸಿ ಅವರ ಆತ್ಮಕ್ಕೆ ಗೌರವ ದೊರಕಿಸಿಕೊಟ್ಟಿದ್ದು ಬಿಜೆಪಿ ಪಕ್ಷವೇ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ತಾಲೂಕಿನ ಬನ್ನೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈದೇಶಕ್ಕೆ ಪ್ರಧಾನ ಮಂತ್ರಿಗಳಾಗಿ ರಾಜೀವ್ ಗಾಂಧಿಯವರು ಬಂದ ವೇಳೆ ಅವರೆಷ್ಟು ಪ್ರಾಮಾಣಿಕರಾಗಿದ್ದರೆಂದರೆ ನಾನು ಗ್ರಾ.ಪಂ. ಕೊಡುವ 100 ರೂಗಳ ಅನುದಾನದ ಪೈಕಿ ಅದು ಪಂಚಾಯ್ತಿಗೆ ತಲುಪುವ ವೇಳೆಗೆ 85 ರೂ.ಗಳಷ್ಟು ಸೋರಿಕೆಯಾಗುತ್ತಿದೆ ಎಂದು ಅಸಹಾಯಕತೆ ತೋರಿದ್ದರು.
ನಂತರ ಬಂದ ಕಾಂಗ್ರೆಸ್ ಸರ್ಕಾರ ರಾಜೀವ್ ಗಾಂಧಿಯವರ ಆಶಯವನ್ನು ಈಡೇರಿಸಲಿಲ್ಲ ವೇಕೆ ಸೋರಿಕೆಯಾಗುತ್ತಿದ್ದ ಹಣವನ್ನು ತಡೆಯಲು ಯಾಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದ ಅವರು ರಾಜೀಬ್ ಗಾಂಧಿಯವರ ಆಶಯವನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು. ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನವನ್ನು ನೀಡುವ ಮೂಲಕ ಸೋರಿಕೆಯನ್ನು ತಪ್ಪಿಸಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು ಎಂದರು.
ರಾಜಕಾರಣದಲ್ಲಿ ಇತ್ತೀಚೆಗೆ ಬಿಚ್ಚು ಮನಸ್ಸಿನ ಮಾತುಗಳು ಕಡಿಮೆಯಾಗುತ್ತಿವೆ.ರಾಜಕಾರಣದ ವ್ಯವಸ್ಥೆಯನ್ನು ನಾವೆಲ್ಲರೂ ಚರ್ಚೆಯ ವಸ್ತುಗಳನ್ನಾಗಿಟ್ಟು ಕೊಳ್ಳುವಂತಾಗಿದೆ.ರಾಜಕಾರಣ ಸ್ವಚ್ಚವಾಗಿರಬೇಕು,ರಾಜಕಾರಣಿ ಸ್ವಚ್ಚವಾಗಿರಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಆದರೆ ಚುನಾವಣೆಗಳು ಬಂದಾಗ ಒಬ್ಬ ಜನಪ್ರತಿನಿಧಿಯಾಗುವಾತ ಅನುಭವಿಸುವ ಯಾತನೆ ಚರ್ಚೆಯ ವಸ್ತುವಾಗುತ್ತದೆ.ಚುನಾವಣೆ ಪ್ರಜಾಪ್ರಭುತ್ವದಲ್ಲಿ ಸಹಜ ಪ್ರಕ್ರಿಯೆ,ಅಂತಹುದೇ ಮತ್ತೊಂದು ಚುನಾವಣೆ ಇದೇ 10 ರಂದು ಎದುರಾಗಿದೆ.
25 ಸ್ಥಾನಗಳಿಗೆ ಆರು ವರ್ಷಗಳ ಅವಧಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಈ ಬಾರಿ 9 ತಿಂಗಳ ಹಿಂದೆ ಗೆದ್ದು ಬಂದ ಗ್ರಾ.ಪಂ.ಸದಸ್ಯರು, ಸ್ಥಳೀಯ ಸಂಸ್ಥೆ ಸದಸ್ಯರಿಗೆ ಮತದಾನದ ಹಕ್ಕಿರುತ್ತದೆ. ತಾಲೂಕಿನಲ್ಲಿ 520ಸದಸ್ಯರಿಗಿಂತಲೂ ಹೆಚ್ಚು ಮಂದಿ ಸದಸ್ಯರು ಪದವೀಧರರಾಗಿ ಆಯ್ಕೆಯಾಗಿ ಬಂದಿದ್ದಾರೆ.ಗೆದ್ದಿರುವ ಎಲ್ಲರೂ ಪಕ್ಷಾತೀತವಾಗಿ ಗೆದ್ದು ಬಂದಿದ್ದು ಅವರಿಗೆ ಅವರದೇ ಆದ ಭಾವನೆಗಳಿವೆ.ಅವರೆಲ್ಲರನ್ನು ಭೇಟಿ ಮಾಡಿದ ವೇಳೆ ಗ್ರಾ.ಪಂ. ಅಭಿವೃದ್ಧಿಗಾಗಿ ದುಡಿಯಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ತಿ.ನರಸೀಪುರ ತಾಲೂಕನ್ನು ಮಾಡೆಲ್ ಮಾಡಲು ಯೋಜನೆ
ಮೈಸೂರು ಅರಮನೆಯನ್ನು ಹೊರತು ಪಡಿಸಿದರೆ ತಾಲೂಕು ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.ತಾಲೂಕು ಯಾವುದರಲ್ಲೂ ಕಡಿಮೆಯಿಲ್ಲದ ವಿಧಾನ ಸಭಾ ಕ್ಷೇತ್ರವಾಗಿದ್ದು,ಪ್ರೇಕ್ಷಣೀಯ ಸ್ಥಳವನ್ನಾಗಿಸಲೂ ಎಲ್ಲಾ ಅರ್ಹತೆಗಳನ್ನು ಒಳಗೊಂಡಿದೆ.ಧಾರ್ಮಿಕವಾಗಿ ದೊಡ್ಡ ಇತಿಹಾಸ ಹೊಂದಿರುವ ಕ್ಷೇತ್ರ ವನ್ನು ಪ್ರವಾಸಿ ಕ್ಷೇತ್ರವನ್ನಾಗಿಸುವ ಸಂಬಂಧ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೆ.ಸಿ.ಲೋಕೇಶ್ ನಾಯಕ್, ಮಾಜಿ ಶಾಸಕ ಎನ್.ಎಲ್.ಭಾರತೀಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಕಾರ್ಯಕಾರಿಣಿ ಸದಸ್ಯ ಮಹದೇವಯ್ಯ, ಹಿರಿಯ ಮುಖಂಡ ತೋಟದಪ್ಪ ಬಸವರಾಜು, ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಸಿದ್ದಮಲ್ಲಪ್ಪ(ಕಿಟ್ಟಿ), ಲೋಕೇಶ್ ಮತ್ತಿತರರಿದ್ದರು.