ರಾಜಿ ಸಂಧಾನದ ಮೂಲಕ ಒಂದಾದ ದಂಪತಿಗಳುಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕು:ನ್ಯಾ.ಎಸ್.ಕೆ.ಕನಕಟ್ಟೆ

ಬೀದರ, ಮೇ 9:ಹುಟ್ಟಿಸಿದ ದೇವರು ಎಲ್ಲರಿಗೂ ಒಂದು ಸುಂದರವಾದ ಬದುಕನ್ನು ಕೊಟ್ಟಿರುತ್ತಾನೆ, ಅದನ್ನು ನಾವು ಮಾಡುವ ಕಾಯಕದ ಆಧಾರದ ಮೇಲೆ ಕಟ್ಟಿಕೊಂಡು ಹೋಗಬೇಕು ಆಗಲೇ ಸಂಸಾರ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ. ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಎರಡು ಸುಂದರವಾಗಿರುತ್ತವೆ. ಬದಲಾದ ಕಾಲಘಟ್ಟದಲ್ಲಿ ದಂಪತಿಗಳಿಬ್ಬರು ಚಿಕ್ಕ ಪುಟ್ಟ ವಿಚಾರಗಳಿಗೆ ಪೆÇೀಲಿಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ / ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜಿ ಸಂಧಾನ ಮಾಡಿಕೊಂಡ ದಂಪತಿಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸೀವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.

ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಅನರಾಜ ತಂದೆ ಶಿವಪುತ್ರ ಇವರು 2013 ರಲ್ಲಿ ಚಿಟಗುಪ್ಪಾ ನಗರದ ಸರಿತಾ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿದರು.ಮತ್ತು ಅವರಿಬ್ಬರಿಗೆ 4 ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದು, ಮದುವೆಯ ನಂತರ 8ವರ್ಷಗಳ ಕಾಲ ವೈವಾಹಿಕ ಬದುಕು ಸುಂದರವಾಗಿಯೇ ಇತ್ತು ಆದರೆ ಒಂದೆರಡು ವರ್ಷಗಳ ನಂತರ ಸಾಂಸಾರಿಕ ವೈಮನಸ್ಸುಗಳಿಂದ ಕುಡಿದು ಬೈಯುವುದು ಹೊಡೆಯುವುದು ಮಾಡುತ್ತಾರೆ ಎಂದು ಸರಿತಾ ತನ್ನ ಗಂಡನ ಬಗ್ಗೆ ದೂರನ್ನು ತನ್ನ ತವರಿಗೆ ಸುದ್ದಿ ಮುಟ್ಟಿಸಿ ತರುವಾಯ ಚಿಟಗುಪ್ಪಾ ಪೆÇೀಲಿಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಿದಾಗ ಚಿಟಗುಪ್ಪಾ ಪೆÇೀಲಿಸರು ಹೆಂಡತಿಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿರುತ್ತಾರೆ.

ಹೆಂಡತಿಯು ಸಾಂತ್ವಾನ ಕೇಂದ್ರದ ಮುಖಾಂತರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ, ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಹಿರಿಯ ಸೀವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎಸ್.ಕೆ.ಕನಕಟ್ಟೆ ಅವರು ನೋಟಿಸ್ ಜಾರಿ ಮಾಡಿ ಸದರಿ ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ, ಗಂಡನನ್ನು ಬುದ್ಧಿಮಾತು ಹೇಳಿ ಮಕ್ಕಳ ಹಿತದೃಷ್ಟಿಯಿಂದ ಒಂದಾಗುವುದು ಅತಿ ಮುಖ್ಯವಾಗಿರುತ್ತದೆ ಮತ್ತು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ದಿ: 06.05.2023 ರಂದು ದಂಪತಿಗಳಿಬ್ಬರನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಗಳನ್ನು ಒಂದು ಮಾಡಿರುತ್ತಾರೆ. ರಾಜಿ ಸಂಧಾನದ ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಮಹೇಶಕುಮಾರ ಶಿವಕುಮಾರ ಪಾಟೀಲರು ಪೆÇೀಷಕರು ಮತ್ತು ಮಕ್ಕಳು ಹಾಗೂ ಗಂಡ ಹೆಂಡತಿ ಯಾರೇ ಇರಲಿ ಅಂದುಕೊಂಡು ಬಾಳುವುದಕ್ಕಿಂತ ಹೊಂದಿಕೊಂಡು ಬಾಳುವುದು ಲೇಸು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಂಪತಿಗಳ ಹತ್ತಕ್ಕೂ ಅಧಿಕ ಸಂಬಂಧಿಕರು ಕೇಶವರಾವ ಶ್ರೀಮಾಳೆ ವಕೀಲರು, ಹಾಗೂ ಪ್ರಾಧಿಕಾರದ ಸಿಬ್ಬಂದಿಗಳಾದ ಜಗಧೀಶ್ವರ ದೊರೆ, ಶಂಕ್ರಪ್ಪ ಜನಕಟ್ಟೆ, ಆಕಾಶ ಸಜ್ಜನ, ಜೀವನ, ಮತ್ತು ಯೋಹನ ಮತ್ತಿತರರು ರಾಜಿ ಸಂಧಾನದ ಮೂಲಕ ಒಂದಾದ ದಂಪತಿಗಳಿಗೆ ಶುಭಕೋರಿದರು.