ರಾಜಾ ವೆಂಕಟಪ್ಪ ನಾಯಕರಿಂದ ಅಂಗವಿಕಲರಿಗೆ ೨೧ ತ್ರಿಚಕ್ರ ವಾಹನ ವಿತರಣೆ

ಮಾನ್ವಿ.ನ.೧೨- ೨೦೨೦-೨೧ ನೇ ಸಾಲಿನ ಸ್ಥಳೀಯ ಶಾಸಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು ೨೧ ಅಂಗವಿಕಲರ ಫಲಾನುಭವಿಗಳಿಗೆ ತ್ರಿಚಕ್ರದ ವಾಹನ ಗಾಡಿಗಳನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ವಿತರಿಸಲಾಯಿತು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ೨೦೨೦-೨೧ ನೇ ಸಾಲಿನ ಸ್ಥಳೀಯ ಶಾಸಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು ೨೧ ಅಂಗವಿಕಲರ ಫಲಾನುಭವಿಗಳಿಗೆ ತ್ರಿಚಕ್ರದ ವಾಹನ ಗಾಡಿಗಳನ್ನು ವಿತರಣೆ ಮಾಡಿದ ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಮಾನವಿ ಇವರು ನಂತರ ಮಾತನಾಡಿದ ಶಾಸಕರು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಅಂಗವಿಕಲರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕರು ಹೇಳಿದರು .ಅಂಗವಿಕಲರು ಈ ಒಂದು ಯೋಜನೆಯಿಂದ ತುರ್ತು ಸಂದರ್ಭದಲ್ಲಿ ಇಂತಹ ಗಾಡಿಗಳನ್ನು ಬಳಕೆ ಮಾಡಿಕೊಂಡು ಸಾಮಾನ್ಯದಂತೆ ಹಳ್ಳಿಗಳಿಂದ ಪಟ್ಟಣಕ್ಕೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಶಾಸಕರು ಹೇಳಿದರು ಅಂಗವಿಕಲರಿಗೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಶಾಸಕರು ಹೇಳಿದರು.
ಇದೆ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ,ಹಿಂದುಳಿದ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷರಾದ ಜಂಬುನಾಥ ಯಾದವ,ಜೆಡಿಎಸ್ ಪಕ್ಷದ ವಕ್ತಾರಾದ ನಾಗರಾಜ ಭೋಗಾವತಿ,ಶರಣಪ್ಪ ಗೌಡ ಮದ್ಲಾಪೂರ,ಚನ್ನಬಸಯ್ಯ ಸ್ವಾಮಿ,ಈರಣ್ಣ ಪೋತ್ನಾಳ,ರಂಜಿನ ಕಾಂತ ಗೌಡ,ಜಸ್ವಂತ ಸೇಠ್,ಪಿ ರವಿಕುಮಾರ್,ಬಸವರಾಜ ನಾಯಕ ಊರಲಗಡಿ,ಶುಭಾನ್ ಬೇಗ್,ಪುಟ್ರ್ ಖಾಜಾ,ಅನ್ಸಾರ್ ಕವಿತಾಳ, ಶಿವರಾಜ ನಾಯಕ,ವಿರೇಶ ಉಪ್ಪಾರ್,ಯಲಪ್ಪ ನಾಯಕ ವಕೀಲ,ಬಸನಗೌಡ ಬೆಟ್ಟದೊರು,ಸೂಗೂರಾಯ್ಯ ಸ್ವಾಮಿ ಗಣದಿನ್ನಿ,ಅಮರೇಶ ನಾಯಕ ಭ್ಯಾಗವಾಟ,ಗೋಪಾಲ ನಾಯಕ ಹರವಿ,ದೇವಗೌಡ ಉದ್ಬಾಳ, ಹನುಮಂತ ನಾಯಕ ರಬ್ಬಣಕಲ,ಚನ್ನಬಸವ ಗೌಡ ನಂದಿಹಾಳ,ಶರಣಬಸವ ನಾಯಕ ನಂದಿಹಾಳ,ಸಂಪತ್ ಕುಮಾರ್ ಜಾಗೀರಪ್ಪನೂರು,ಸಂತೋಷ್ ಹೂಗಾರ,ಅಂಬಣ್ಣ ನಾಯಕ ಹೊಸೂರು,ಶಿವರಾಮ ನಾಯಕ ಮುಸ್ಟೂರು,ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಗವಿಕಲರು ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.