ರಾಜಾ ರಾಮಚಂದ್ರ ನಾಯಕ ಹುಟ್ಟುಹಬ್ಬ: ರಕ್ತದಾನ ಮಾಡಿದವರಿಗೆ ಸನ್ಮಾನ

ಮಾನ್ವಿ.ನ.೨೪-ಮಾನ್ವಿ ವಿಧಾನಸಭಾ ಶಾಸಕರ ಸಹೋದರರಾದ ರಾಜಾ ರಾಮಚಂದ್ರ ನಾಯಕ ರವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದವರಿಗೆ ಸನ್ಮಾನಿಸಲಾಯಿತು.
ಪಟ್ಟಣದ ಜೆಡಿಎಸ್ ಕಾರ್ಯಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ರಾಜಾರಾಮಚಂದ್ರ ನಾಯಕ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ೫೬ ಜನರು ರಕ್ತದಾನ ಮಾಡಿದವರಿಗೆ ಹೃದಯಪೂರ್ವಕವಾಗಿ ರಾಜಾರಾಮಚಂದ್ರ ನಾಯಕ ಅವರು ಗೌರವದಿಂದ ಶಾಲು ಹೊದಿಸಿ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷರಾದ ಪಿ ರವಿಕುಮಾರ್ ಕೋನಾಪುರಪೇಟೆ,ಗೋಪಾಲ ನಾಯಕ ಹರವಿ,ಬಸನಗೌಡ ಉಟಕನೂರು, ಮಹಾಂತೇಶ ಪಾಟೀಲ್ ಅತ್ತನೂರು,ಮೌಲಾಸಾಬ್,ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.