ರಾಜಾ ಅಮರೇಶ ನಾಯಕ ಪರ ತಿಪ್ಪರಾಜು ಹವಾಲ್ದಾರ್ ಬಿರುಸಿನ ಪ್ರಚಾರ

ರಾಯಚೂರು.ಏ.೨೭- ಗ್ರಾಮಾಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಬಿರು ಬಿಸಲಿನ ನಡುವೆ ಗ್ರಾಮಗಳತ್ತ ಬಿರುಸಿನ ಪ್ರಚಾರ ನಡೆಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ತಿಪ್ಪರಾಜು ಹವಾಲ್ದಾರ್
ಅವರನ್ನು ಕಾರ್ಯಕರ್ತರು ಮತ್ತು ಬೆಂಬಲಗರು ಅಭೂತಪೂರ್ವ ಸ್ವಾಗತ ಕೋರಿದರು. ನಿರೀಕ್ಷೆ ಮೀರಿ ಜನಸಾಗರವೇ ಹರಿದು ಬಂದು ಅವರನ್ನು ಅತ್ಯಂತ ಅದ್ದೂರಿಯಾಗಿ ಬರ ಮಾಡಿಕೊಳ್ಳುವುದರ ಮೂಲಕ ಕ್ಷೇತ್ರದ ಸುಪುತ್ರ ಎಂದು ಭಾವಸಿ ತಿಪ್ಪರಾಜು ಹವಾಲ್ದಾರ್ ಅವರಿಗೆ ಜೈಕಾರ ಕೂಗಿದರು. ತಿಪ್ಪರಾಜು ಹವಾಲ್ದಾರ್ ಅವರ ಬಿರುಸಿನ ಪ್ರಚಾರಕ್ಕೆ ರಾಜಾ ಅಮರೇಶ ನಾಯಕ ಅವರ ಗೆಲವು ನಿಶ್ಚಿತ ಎಂದು ಗ್ರಾಮೀಣ ಪ್ರದೇಶದ ಎಲ್ಲೆಡೆ ಕೂಗು ಕೇಳಿಬರುತ್ತಿದೆ.ಗ್ರಾಮೀಣ ಪ್ರದೇಶದ ವ್ಯಾಪ್ತಿಯ ಆಶಾಪೂರ, ನೆಲಹಾಳ, ಮಮದಾಪೂರ, ಹುಣಸಾಳಹುಡ, ಕಲ್ಮಲಾ,ಹಾಳ ವೆಂಕಟಾಪೂರ, ಸುಲ್ತಾನಪೂರ, ರಘುನಾಥಹಳ್ಳಿ, ಪತ್ತೇಪೂರ ಹಾಗೂ ಮರ್ಚೇಡ ಗ್ರಾಮಗಳಲ್ಲಿ ಸಾವಿರರು ಸಂಖ್ಯೆಯ ಅಭಿಮಾನಿಗಳ ಜೊತೆ ಸೇರಿ ವ್ಯಾಪಕ ಪ್ರಚಾರ ಕೈಗೊಂಡರು.
ನಂತರ ಮಾತನಾಡಿ, ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ ಈ ಹಿನ್ನಲೆಯಲ್ಲಿ ದೇಶದ ಭದ್ರತೆ ಹಿಂದೂಗಳ ರಕ್ಷಣೆಗೆ ಮೋದಿ ಆಡಳಿತ ಅವಶ್ಯಕ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ರಾಜಾ ಅಮರೇಶ ನಾಯಕ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು. ಭಾರತ ಜನತಾ ಪಕ್ಷದ ಚಿಹ್ನೆಯಾದ ಕಮಲ ಗುರುತಿಗೆ ಮತ ಚಲಾಯಿಸುವಂತೆ ಕೋರಿದರು.