
ಕಲಬುರಗಿ,ಮೇ 1: ನಗರದ ರಾಜಸ್ಥಾನಿ ಗೋಬಂಧುಗಳು ಗೋವುಗಳಿಗಾಗಿ ಶ್ರೀ ಮಾಧವ ಗೋಶಾಲೆಗೆ ಎರಡು ಟ್ರ್ಯಾಕ್ಟರ್ ಕಲ್ಲಂಗಡಿ ಹಣ್ಣುಗಳನ್ನು ನೀಡಿದ್ದಾರೆ.
ಬೇಸಿಗೆಯಲ್ಲಿ ಸ್ವಾಭಾವಿಕವಾಗಿ ಹಸಿ ಮೇವಿನ ಕೊರತೆಯಿಂದಾಗಿ ಗೋವುಗಳಲ್ಲಿ ನೀರಿನಂಶದ ಕೊರತೆಯಾಗಿ ಆರೋಗ್ಯದ ಸಮಸ್ಯೆಯುಂಟಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಸೇರಿ ಕಲ್ಲಂಗಡಿ ಹಣ್ಣುಗಳನ್ನು ಕೊಡಬೇಕೆಂದು ಯೋಚಿಸಿದ್ದೇವೆ ಎಂದು ಗೋಭಕ್ತರಾದ ರವಿಕುಮಾರ ಹೇಳಿದರು. ರಾಜಸ್ಥಾನಿ ಗೋಬಂಧುಗಳು ನಿರಂತರವಾಗಿ ಸಹಕಾರ, ನೆರವು ನೀಡುತ್ತಾ ಬಂದಿದ್ದು ಅವರ ಈ ಸೇವೆಗೆ ಗೋಶಾಲೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಸಂಸ್ಥಾಪಕ
ಮಹೇಶ ಬೀದರಕರ್ ತಿಳಿಸಿದ್ದಾರೆ.