ರಾಜಸ್ಥಾನದಲ್ಲಿ ಲಿಥಿಯಂ ನಿಕ್ಷೇಪ ಪತ್ತೆ

ಜೈಪುರ, ಮೇ.೮- ರಾಜಸ್ಥಾನದ ದೇಗಾನಾದಲ್ಲಿ ಲಿಥಿಯಂ ನಿಕ್ಷೇಪಗಳನ್ನು ಪತ್ತೆಹಚ್ಚಲಾಗಿದೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗಣಿಗಾರಿಕೆ ಮತ್ತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಪತ್ತೆಯಾದ ನಿಕ್ಷೇಪಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ ಎನ್ನಲಾಗಿದೆ.
ಇಲ್ಲಿನ ಲಿಥಿಯಂ ಪ್ರಮಾಣವು ದೇಶದ ಬೇಡಿಕೆಯ ಶೇಕಡಾ ೮೦ ರಷ್ಟನ್ನು ಪೂರೈಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಸ್ಥಳವು ೫.೯ ಮಿಲಿಯನ್ ಟನ್ ಲಿಥಿಯಂ ನಿಕ್ಷೇಪವನ್ನು ಹೊಂದಿದೆ ಎಂದು ಭಾರತೀಯ ಭೌಗೋಳಿಕ ಸಮೀಕ್ಷೆ ಹೇಳಿದೆ.
ಲಿಥಿಯಂ ವಿಶ್ವದ ಅತ್ಯಂತ ಹಗುರ ಮತ್ತು ಮೃದುವಾದ ಲೋಹವಾಗಿದೆ. ಖನಿಜವು ಅದು ಸಂಗ್ರಹಿಸುವ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರವರ್ತನೆ ಮಾಡುತ್ತದೆ . ಲಿಥಿಯಂ ನಾನ್-ಫೆರಸ್ ಲೋಹವಾಗಿದೆ ಮತ್ತು ಇವಿ ಬ್ಯಾಟರಿಗಳಲ್ಲಿನ ಪ್ರಮುಖ ಘಟಕಗಳಲ್ಲಿ ಒಂದಾಗಿದೆ.