ರಾಜಸ್ತಾನ ೨ ವಾರ ಲಾಕ್

ಜೈಪು, ಏ. ೧೯- ರಾಜಸ್ತಾನದಲ್ಲಿ ಕೊರೊನಾ ಸೋಂಕು ತಡೆಗೆ ಮೇ ೩ ರವರೆಗೆ ಲಾಕ್‌ಡೌನ್ ಜಾರಿ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎಲ್ಲಾ ವಾಣಿಜ್ಯ ಮಳಿಗೆಗಳು, ಕಛೇರಿಗಳು, ಮಾರುಕಟ್ಟೆಗಳು ಮುಂದಿನ ೧೫ ದಿನಗಳವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳಾದ ಬ್ಯಾಂಕ್, ಹಾಲು, ತರಕಾರಿ ಮತ್ತು ಔಷಧಿ ಅಂಗಡಿಗಳು, ಅನಿಲ ಪೂರೈಕೆ ಪೆಟ್ರೋಲ್ ಬಂಕ್ ತೆರೆದಿರುತ್ತವೆ. ಹೋಟೆಲ್‌ಗಳು ಮತ್ತು ಸಿಹಿ ತಿಂಡಿಗಳ ಶಾಪ್‌ಗಳಿಂದ ಪಾರ್ಸಲ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಕಾರ್ಖಾನೆಗಳು, ವಿದ್ವನ್ ಮಾನ ಮತ್ತು ಮಾಧ್ಯಮ ನೌಕರರು ಲಾಕ್‌ಡೌನ್ ಅವಧಿಯಲ್ಲಿ ಭಾವಚಿತ್ರಗಳನ್ನು ತೋರಿಸಿ ಸಂಚರಿಸಬಹುದಾಗಿದೆ.
ರೈಲು, ಬಸ್ ಮತ್ತು ವಿಮಾನದಲ್ಲಿ ಪ್ರಯಾಣಿಸುವವರು ತಮ್ಮ ಬಳಿಯಿರುವ ಟಿಕೆಟ್ ತೋರಿಸಿ, ಸಂಚರಿಸಲು ಅವಕಾಶ ನೀಡಲಾಗಿದೆ. ರಾಜ್ಯಸ್ತಾನದಲ್ಲಿ ಪ್ರತಿದಿನ ೧೦ ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ ೪೨ ಜನರು ಸಾವನ್ನಪ್ಪಿದ್ದರು. ಜೈಪುರದಲ್ಲೇ ೨ ಸಾವಿರ ಪ್ರಕರಣ ದಾಖಲಾಗುತ್ತಿವೆ. ರಾಜಸ್ತಾನದಲ್ಲಿ ಒಟ್ಟು ೬೭,೩೮೭ ಸಕ್ರಿಯ ಪ್ರಕರಣಗಳು ದಾಖಲಾಗುತ್ತಿವೆ.