ರಾಜಸ್ತಾನ- ಚೆನ್ನೈ ನಡುವೆ ಹಣಾಹಣಿ


ಮುಂಬೈ, ಏ. ೧೯- ಐಪಿಎಲ್ ಕ್ರಿಕೆಟ್‌ನಲ್ಲಿಂದು ರಾಜಸ್ತಾನ ರಾಯಲ್ ಮತ್ತು ಚೆನ್ನೈ ಸೂಪರ್ ಕಿಂಗ್ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲೇ ಉಭಯ ತಂಡಗಳು ಸೋಲು ಅನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿವೆ.
ಎಂ.ಎಸ್. ಧೋನಿ ನೇತೃತ್ವದ ತಂಡ ಕಳೆದ ಪಂದ್ಯದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿತ್ತು. ಡು ಪ್ಲೇಸಿ, ಮೋಯಿನ್ ಅಲಿ ಬ್ಯಾಟಿಂಗ್ ಲಯ ಕಂಡುಕೊಂಡಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದರ ಜೊತೆಗೆ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಅಂಬಟಿ ರಾಯುಡು ಉತ್ತಮ ಆಟ ಪ್ರದರ್ಶಿಸಬೇಕಾಗಿದೆ. ಎದುರಾಳಿ ತಂಡವನ್ನು ಬೌಲರ್‌ಗಳಾದ ದೀಪಕ್ ಚಹರ್, ಶಾರ್ದೂಲ್, ಜಡೇಜಾ ಕಟ್ಟಿ ಹಾಕಬೇಕಾಗಿದೆ.
ರಾಜಸ್ತಾನ್ ರಾಯಲ್ ಇಂದಿನ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇಂದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಇದರ ಜೊತೆಗೆ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್ ಉತ್ತಮ ಆಟವಾಡಬೇಕಾಗಿದೆ. ವಾಖೆಂಡ್ ಕ್ರೀಡಾಂಗಣ ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ರನ್ ಹೊಳೆಯುವ ನಿರೀಕ್ಷೆಯಿದೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ. ಒಟ್ಟಾರೆ ಮುಂಬೈ ತಂಡಗಳ ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಡಲಿದೆ.