ರಾಜಸ್ತಾನ ಗೆ 2ರನ್ ಗಳ ರೋಚಕ ಜಯ,ರಾಹುಲ್, ಮಯಾಂಕ್ ಆಟ ವ್ಯರ್ಥ

ದುಬೈ, ಸೆ.21- ನಾಯಕ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ಅವರ ಶತಕದ ಜತೆಯಾಟದ ನಡುವೆಯೂ ಐಪಿಎಲ್ ಟೂರ್ನಿಯಲ್ಲಿಂದು ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ಎರಡು ರನ್ ಗಳ ರೋಚಕ ಜಯಗಳಿಸಿತು.


ಇದರೊಂದಿಗೆ ರಾಹುಲ್ ಪಡೆ ಕಡೆಗಳಿಗೆಯವರೆಗೂ ನಡೆಸಿದ ಹೋರಾಟ ವ್ಯರ್ಥವಾಯಿತು.
186 ರನ್ ಗಳ ಸವಾಲಿನ ಬೆನ್ನಹತ್ತಿದ ಪಂಜಾಬ್ , ರಾಜಸ್ಥಾನ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿತು.
ರಾಹುಲ್ ನೀಡಿದ ಮೂರು ಕ್ಯಾಚ್ ನ್ನು ರಾಜಸ್ಥಾನ ಕೈ ಚೆಲ್ಲಿತು. ಇದರ ಲಾಭ ಪಡೆದ ರಾಹುಲ್ ಮತ್ತು ಮಯಾಂಕ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು.
ರಾಹುಲ್ 33 ಎಸೆತಗಳಲ್ಲಿ 4 ಬೌಂಡರಿ ಎರಡು ಸಿಕ್ಸರ್ ಬಾರಿಸಿ 49 ರನ್ ಗಳಿಸಿದರು. ಅಲ್ಲದೆ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ 3000 ರನ್ ಪೂರೈಸಿದ ಕೀರ್ತಿಗೆ ಭಾಜನರಾದರು
ಮತ್ತೊಂದಡೆ ಅಗರ್ ವಾಲ್ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 67 ರನ್ ಬಾರಿಸಿದರು. ಈ ಜೋಡಿ ಮೊದಲನೇ ವಿಕೆಟ್ ಗೆ 120 ರನ್ ಸೇರಿಸಿತು.
ನಂತರ ಜತೆಗೂಡಿದ ಏಡನ್ ಮರ್ ಕರಂ ಹಾಗೂ‌‌‌ ನಿಕೊಲಾಸ್ ಪೂರನ್ ತಂಡಕ್ಕೆ ಗೆಲುವು ಕೊಂಡೊಯ್ದರು ‌ ಆದರೆ ಅದೃಷ್ಟ ಒಲಿಯಲಿಲ್ಲ. ಆಟದಲ್ಲಿ ಏನು ಬೇಕಾದರೂ ಪವಾಡ ನಡೆಯಬಹುದು ಎಂಬುದಕ್ಕೆ ಇಂದಿನ ಪಂದ್ಯವೇ ಸಾಕ್ಷಿ. ಒಂದು ಎಸೆತ ಮೂರು ರನ್ ಬೇಕಾಗಿತ್ತು.‌ ಅದನ್ನು ಗಳಿಸಲು ಪಂಜಾಬ್ ವಿಫಲಗೊಂಡು ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಎರಡು ರನ್ ಗಳಿಂದ ವೀರೋಚಿತ ಸೋಲು ಕಂಡಿತು. ಮರ್ಕರಂ 26 ಹಾಗೂ ನಿಕೊಲೊಸ್ 32ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಮಹಿಪಾಲ್​ ಲೋಮ್ರೋರ್​ ಮತ್ತು ಯಶಸ್ವಿ ಜೈಸ್ವಾಲ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ್​ 185 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಜೈಸ್ವಾಲ್ 49 ಹಾಗೂ ಲೂಯಿಸ್ 36 ರನ್ ಗಳಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು.
ಬಳಿಕ ಆಡಲು ಬಂದ ಲಿಯಾಮ್ ಲಿಂಗ್ ಸ್ಟೋನ್ 25 ರನ್ ಗಳಿಸಿ ನಿರ್ಗಮಿಸಿದರು.ಲೊಮ್ರೋರ್ 17 ಎಸೆತಗಳಲ್ಲಿ 43 ರನ್ ಗಳಿಸಿದರು.
ಪಂಜಾಬ್ ಪರ ಆರ್ಷ್ ದೀಪ್ ಸಿಂಗ್ 5,ಮೊಹ್ಮದ್ ಶಮಿ 3 ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.