ರಾಜಶ್ರೀ ಕಂಪನಿ ಜನರಿಗೆ ಉದ್ಯೋಗ, ಶಿಕ್ಷಣ, ಅಭಿವೃದ್ಧಿ ಕಾಮಗಾರಿ, ಸೇರಿದಂತೆ ರೈತರಿಗೂ ಹೆಚ್ಚಿನ ಆದ್ಯತೆ:ಕೆವಿವಿವಾಯ್ ಎಸ್, ನಾರಾಯಣ

ಸೇಡಂ,ಸೆ,06: ಕಂಪನಿಯು ಪ್ರಾರಂಭವಾಗಿನಿಂದಲೂ ಇಲ್ಲಿವರೆಗೆ ಕಂಪನಿ ವ್ಯಾಪ್ತಿಗೆ ಬರುವಂತಹ ಎಲ್ಲಾ ಹಳ್ಳಿಯ ಜನರಿಗೆ ಉದ್ಯೋಗ, ಶಿಕ್ಷಣ, ವಿವಿಧ ಹಳ್ಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಂಪನಿಯು ಸಹಕಾರ ನೀಡುತ್ತಾ ಬರುತ್ತಿದೆ ಎಂದು ಕೆವಿವಿವಾಯ್ ಎಸ್, ನಾರಾಯಣ ಅಭಿಪ್ರಾಯ ಪಟ್ಟರು.
ತಾಲೂಕಿನ ಮಳಖೇಡ ಆದಿತ್ಯ ನಗರದ ಅಲ್ಟ್ರಾ ಟ್ರ್ಯಾಕ್ ಸಿಮೆಂಟ್ ಕಂಪನಿಯ ಯೂನಿಟ್ ರಾಜಶ್ರೀ ಘಟಕದಲ್ಲಿ ಆಯೋಜಿಸಲಾಗಿದ್ದ 200 ರೈತರಿಗೆ ತಾಡಪತ್ರಿ ವಿತರಿಸಿ ಮಾತನಾಡಿದ ಅವರು ಕಂಪನಿಯಿಂದ ಹೆಚ್ಚಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರದ ಆದೇಶದಂತೆ ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್ಫೇರ್ ಫೌಂಡೇಶನ್ ರಾಜಶ್ರೀ ಸಿಮೆಂಟ್ ಘಟಕ ಮಾಡಿಕೊಂಡು ಬರುತ್ತಿದೆ ಎಂದರು,
ಈ ವೇಳೆಯಲ್ಲಿ ರವಿಕುಮಾರ್ ಎಚ್.ಆರ್ ಲೀಗರ್ ಡಿಪಾಟ್ಮೆರ್ಂಟ್, ಮಳಖೇಡ ಗ್ರಾಪಂಯ ಮಾಜಿ ಅಧ್ಯಕ್ಷ ರಾಜಶೇಖರ್ ಪುರಾಣಿಕ, ಊಡಗಿ ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ರೂಪ ಎಸ್ ಬಾಂಜಿ, ಉಪಾಧ್ಯಕ್ಷ ಸೂರ್ಯಕಾಂತ್, ದಿಗ್ಗಾವ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಳಯ್ಯ, ಉಪಾಧ್ಯಕ್ಷರಾದ ಜಗನ್ನಾಥ್, ಯೂನಿಯನ್ ಲೀಡರಗಳಾದ ಅಯ್ಯಪ್ಪ, ಜಮೀರ್, ಸಿಎ???ರ್ ವ್ಯವಸ್ಥಾಪಕರಾದ ವಿವೇಕಾನಂದ ಬಟಿಗೇರ ವೇದಿಕೆ ಮೇಲೆ ಇದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಅಶ್ವಿನಿ ರಾಥೋಡ್, ಶರಣಪ್ಪ ಯರಗೋಳ, ಕಾಶಿಬಾಯಿ ದಿಗ್ಗಾವ್, ಮಹಾದೇವಿ ಪಾಟೀಲ್, ಸೇರಿದಂತೆ ವಿವಿಧ ಹಳ್ಳಿಯ ರೈತರು ಉಪಸ್ಥಿತರಿದ್ದರು.

ನಿರೂಪಣೆ ಸೋಮಶೇಖರ್ ದೇಗಲಮಡಿ ಮಾಡಿದರು.

ರಾಜಶ್ರೀ ಕಂಪನಿಯು ಸರ್ಕಾರ ಆದೇಶದಂತೆ ಸುತ್ತಮುತ್ತಲಿನ ಜನರಿಗೆ ಉದ್ಯೋಗ ಶಿಕ್ಷಣ ಅಭಿವೃದ್ಧಿ ಸೇರಿದಂತೆ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ರಾಜಶೇಖರ್ ಪುರಾಣಿಕ
ಮಾಜಿ ಗ್ರಾಪಂ
ಅಧ್ಯಕ್ಷರು ಮಳಖೇಡ