ರಾಜಶೇಖರ ಅಸ್ಟೂರ್ ಕಾಂಗ್ರೆಸ್ ಗೆ ಗುಡ್ ಬೈ

ಬೀದರ್:ಜು.19: ಹಿರಿಯ ಮುಖಂಡ ರಾಜಶೇಖರ ಪಾಟೀಲ ಅಷ್ಟೂರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರಿಗೆ ರಾಜೀನಾಮೆ ಪತ್ರಸಲ್ಲಿಸಿದರು.ರಾಜೀನಾಮೆಗೆ ಕಾರಣ ಉಲ್ಲೇಖಿಸಿಲ್ಲ.