ರಾಜಶೇಖರಮೂರ್ತಿ, ಹಿರಿಯಶ್ರೀಗಳ ಆಶಯ ಈಡೇರಿಸುವಲ್ಲಿ ದಿಟ್ಟ ಹೆಜ್ಜೆ: ಮರಿತಿಬ್ಬೇಗೌಡ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.16:- ಕೇಂದ್ರದ ಮಾಜಿ ಸಚಿವರಾದ ದಿ. ಎಂ. ರಾಜಶೇಖರಮೂರ್ತಿ ಹಾಗೂ ಹಿರಿಯ ಶ್ರೀಗಳಾದ ಮಹಾಂತಸ್ವಾಮಿಗಳ ಅಶಯ ಈಡೇರಿಸುವ ನಿಟ್ಟಿನಲ್ಲಿ ದಿಟ್ಟಿ ಹೆಜ್ಜೆ ಇದಾಗಿದೆ. ಸಂಸ್ಥೆಯ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ತಾಲೂಕಿನ ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಸಿಬಿಎಸ್‍ಇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಅಂದು ಹಿರಿಯ ಶ್ರೀಗಳು ಹಾಗೂ ರಾಜಶೇಖರಮೂರ್ತಿ ಅವರು ಬಸವ ವಿದ್ಯಾ ಕೇಂದ್ರ ಸ್ಥಾಪನೆ ಮಾಡಿ, ಈ ಭಾಗದ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಬಯಸಿ, ಹಾಕಿದ ಅಡಿಪಾಯ ಸಕಾರಗೊಂಡಿದೆ. ಬಹಳ ಸುಸಜ್ಜಿತ ಸುಂದರವಾದ ಹಸಿರು ಪರಿಸರದಲ್ಲಿ ನರ್ಸರಿಯಿಂದ ಪದವಿ ಪೂರ್ವ ಶಿಕ್ಷಣದ ತನಕ ವಿದ್ಯಾಭ್ಯಾಸ ಮಾಡಲು ಅವಕಾಶವನ್ನು ಮಾಡಲಾಗಿದೆ. ಅಲ್ಲದೇ ಅಂಗ್ಲ ಮಾದ್ಯಮ ಶಾಲೆಯನ್ನು ಆರಂಭಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಂಡಿರುವ ಕಿರಿಯ ಶ್ರೀಗಳ ಸಾಧನೆ ಪ್ರಶಂಸನೀಯವಾಗಿದೆ ಎಂದರು.
ಈ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವಾತಾವರಣದೊಂದಿಗೆ ನುರಿತ ಶಿಕ್ಷಕ ವೃಂದದ ಬೋದನೆ, ಶಿಕ್ಷಕರು ಪ್ರತಿ ಮಕ್ಕಳನ್ನು ಆಧರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಆಧಾರವಾಗಿಟ್ಟುಕೊಂಡು ಪ್ರೀತಿಯಿಂದ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆ ಎನ್ನಿಸಿದೆ. ಅದೇ ರೀತಿ ಪೆÇೀಷಕರು ಸಹ ತಮ್ಮ ಮಕ್ಕಳ ಕಲಿಕೆ ಬಗ್ಗೆ ಗಮನಿಸಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ವಿದ್ಯಾರ್ಥಿಗಳು ಪಠ್ಯಕ್ರಮದಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ತಾವು ಶಿಕ್ಷಕರು, ಪೆÇೀಷಕರನ್ನು ನೋಡಿ ಕಲಿಯುವುದು ಬಹಳ ಇದೆ.
ಶಿಕ್ಷಕರಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರಗಳು, ನೈತಿಕತೆ ಬದುಕನ್ನು ತಾವು ಕಾಣಬೇಕು ಅದನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಜಗಜ್ಯೋತಿ ಬಸವೇಶ್ವರರ ಚಿಂತನೆಗಳು ಕೂಡ ಸಾಮಾಜಿಕ ಚಿಂತನೆ, ಧಾರ್ಮಿಕ ಚಿಂತನೆಯಾಗಿತ್ತು. ಅವರು ಕೂಡ ಸಮಾನತೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರ ವಿಚಾರಧಾರೆಗಳನ್ನು ಮಕ್ಕಳಿಗೆ ಧಾರೆ ಎರೆಯಬೇಕು ಎಂದರು.
ಶ್ರೀ ಮುರುಘರಾಜೇಂದ್ರ ಸ್ವಾಮಿ ವಿದ್ಯಾ ಸಂಸ್ಥೆಗೆ ಶ್ರಿಗಳ ಕೋರಿಕೆಯಂತೆ ನನ್ನ ಅನುದಾನದಲ್ಲಿ ಶೈಕ್ಷಣಿಕ ಕೇಂದ್ರ ಅಭಿವೃದ್ದಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಮರಿತಿಬ್ಬೇಗೌಡ ಘೋಷಣೆ ಮಾಡಿದರು.
ಕೃಷಿ ಜಂಟಿ ನಿರ್ದೇಶಕ ಡಾ.ಎಂ.ತಿರುಮಲ್ಲೇಶ್, ಹಿರಿಯ ವಕೀಲರಾದ ಅರುಣ್ ಕುಮಾರ್ ಮಾತನಾಡಿದರು. ಮರಿಯಾಲದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಮುರುಘರಾಜೇಂದ್ರಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಹಾಗೂ ಚಾಮರಾಜನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಡಯಟ್‍ನ ಹಿರಿಯ ಉಪನ್ಯಾಸಕ ಯು.ಆರ್.ಲಿಂಗರಾಜೇಅರಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಣ್ಣ, ಉಪಾಧ್ಯಕ್ಷ ಜಿ.ಕುಮಾರಸ್ವಾಮಿ, ಆಡಳಿತ ಅಧಿಕಾರಿ ಆರ್.ಡಿ.ನಾಗರಾಜು, ಪ್ರಾಂಶುಪಾಲ ಗಿರೀಶ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಿರಣ್ ರಾಜು, ಕೆ.ಎಸ್.ಷಡಕ್ಷರಿ ಹಾಗೂ ಸಂಸ್ಥೆಯ ಆಡಳಿತ ನಿರ್ದೇಶಕರು, ಪೆÇೀಷಕರು, ವಿದ್ಯಾರ್ಥಿಗಳು ಹಾಜರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.