ರಾಜಲಬಂಡಾ:ರಸ್ತೆ ದುರಸ್ತಿಗೆ ಮಲ್ಲಯ್ಯ ಸಾಹುಕಾರ ಒತ್ತಾಯ


ರಾಯಚೂರು, ಜೂ.೬- ತಾಲ್ಲೂಕಿನ ರಾಜಲಬಂಡಾ ಗ್ರಾಮದ ರಾಜ್ಯ ಹೆದ್ದಾರಿ ೬೧ ರ ಮುಖ್ಯ ರಸ್ತೆ ತೀರ ಹದಗೆಟ್ಟಿದ್ದು ಶಾಲೆಯ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತಿರುಗಾಡಲು ಸಮಸ್ಯೆಯಾಗಿದೆ ಕೂಡಲೇ ರಸ್ತೆ ದುರಸ್ತಿ ಗೊಳಿಸಬೇಕೆಂದು ಎಂದು ವಿ.ಎಸ್,ಎಸ್,ಎನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಯ್ಯ ಸಾಹುಕಾರ ಒತ್ತಾಯಿಸಿದರು.
ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಬಹಳ ವರ್ಷಗಳಿಂದ ತೊಂದರೆ ಅನುಭವಿಸುತಿದ್ದಾರೆ. ದುರಸ್ತೆಯಾಗದ ಕಾರಣ ಗ್ರಾಮಕ್ಕೆ ಹೋಗಲು ಸಾರ್ವಜನಿಕರು ತೀವ್ರ ಸಮಸ್ತೆ ಎದುರಿಸುತ್ತಿದ್ದಾರೆ.ಗ್ರಾಮದ ಪರಿಶಿಷ್ಟ ಜಾತಿ,ಪ. ಪಂಗಡದ,ಕುರುಬರ ಓಣಿಗಳರಸ್ತೆಗಳೂ ತೀವ್ರ ಹದಗೆಟ್ಟಿದ್ದು. ರಸ್ತೆ ದುರಸ್ತಿ ಗೊಳಿಸ ಲು ಗ್ರಾಮೀಣ ಶಾಸಕ
ಬಸನಗೌಡ ದದ್ದಲ್ ಅವರಿಗೆ ಕಳೆದ ಎರಡು ವರ್ಷಗಳಿಂದ ದುರಸ್ತಿ ಗೊಳಿಸಿ ಎಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ.ಈಗಲಾದರೂ ರಸ್ತೆ ದುರಸ್ತಿ ಹಾಗೂ ಡ್ರೈನೇಜ್ ವ್ಯವಸ್ಥೆ ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.