ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಜಾನಪದ ಸೌರಭ

ಮಲೇಬೆನ್ನೂರು. ಜು.೨೨;ಜಾನಪದ ಸಂಸ್ಕೃತಿ ಹಾಗೂ ಜಾನಪದ ಪ್ರಕಾರಗಳನ್ನು ಪರಿಚಯಿಸುವ ಹಿನ್ನೆಲೆಯಲ್ಲಿ ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಎಜುಕೇಶನ್ ಅಸೋಸಿಯೇಶನ್ ನ  ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಜಾನಪದ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಜಾನಪದ ಗಾಯಕರಾದ ದಾವಣಗೆರೆಯ ಶ್ರೀಮತಿ ಮಹಾದೇವಮ್ಮ ವಿವಿಧ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.ಮುಖ್ಯೋಪಾಧ್ಯಾಯರಾದ ಎಸ್ ಶಶಿಧರ್, ಶಿಕ್ಷಕಿ ಕು. ಅನುಷಾ ಅವರು ಸಹ ಒಂದೊಂದು ಜಾನಪದ ಗೀತೆ ಹಾಡಿ ವಿದ್ಯಾರ್ಥಿಗಳ ಮನ ರಂಜಿಸಿದರು.ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದ ಸೊಗಡನ್ನು ಸಂಭ್ರಮಿಸಿದರು. 

Attachments area