ರಾಜರತ್ನ ಗೌರವ ಪ್ರಶಸ್ತಿ ಪ್ರದಾನ

ವಾಡಿ,ಮೇ.28: ಉತ್ತಮ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ
ಶಿಕ್ಷಕಿ ಸರಸ್ವತಿ ಬಸಲಿಂಗಪ್ಪ ಮುನಗಲ್ ಅವರಿಗೆ ಇತ್ತೀಚಿಗೆ ಬೆಂಗಳೂರಿನ ಅಮ್ಮ ಸೇವಾ
ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ “ರಾಜರತ್ನ ಗೌರವ
ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಟ್ರಸ್ಟ್ ಅಧ್ಯಕ್ಷೆ ನಾಗರತ್ನ ಕೆ, ಉಪಾಧ್ಯಕ್ಷ
ನರಸಿಂಹ ಮೂರ್ತಿ, ಕಾರ್ಯದರ್ಶಿ ಲೀಲಾವತಿ ಸೇರಿದಂತೆ ಅನೇಕರು ಇದ್ದರು.