ರಾಜಮನೆತನದಿಂದ ಬಂದಿದ್ದರು ಜನಪ್ರತಿನಿಧಿಯಾಗಿ ಜನಸಾಮಾನ್ಯರ ಧ್ವನಿ ಯಾಗುವೆ ಎದುವೀರ ಕೃಷ್ಣರಾಜ ಒಡೆಯರ್

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮಾ.16- ನಾನು ರಾಜ ಮನೆತನದಿಂದ ಬಂದಿದ್ದರು ಸಹ ಜನಪ್ರತಿನಿಧಿಯಾಗಿ ಜನಸಾಮಾನ್ಯರ  ಧ್ವನಿ ಯಾಗುವೆ ಎಂದು  ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ ಕೃಷ್ಣರಾಜ ಒಡೆಯರ್ ಅಭಿಪ್ರಾಯಸಿದರು ಅವರಿಂದು ಪಟ್ಟಣದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು 
ಈ ಹಿಂದೆ ಮೈಸೂರು ಅರಮನೆ ಹಾಗೂ ರಾಜಮನೆತನದಿಂದ ಇಡೀ ಭಾರತದ ಭೂಪಟದಲ್ಲಿ ನಮ್ಮ ಹೆಮ್ಮೆಯ ಮೈಸೂರು ಅಡಗಿದ್ದು ಈ ಹಿಂದೆಯೂ ಸಹ ನಮ್ಮ ಮನೆತನದಿಂದ ರಾಜಕೀಯ ಪ್ರಕ್ರಿಯೆಗಳು ನಡೆದಿದ್ದು ಈ ಸಾರಿ ನಾನು ಸಹ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನನ್ನ ಮುಂದೆಯೂ ಸಹ ಮೈಸೂರಿನ ರಾಜಮನೆತನದ ಹೆಸರಿನಲ್ಲಿ ಮೈಸೂರನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅನೇಕ ಯೋಜನೆಗಳು ನನ್ನ ಮುಂದಿದ್ದು ನಿಮ್ಮೆಲ್ಲರ ಸಹಕಾರವಿದೆ ಎಂದಾದರೆ ಮುಂದೊಂದು ದಿನದಲ್ಲಿ ಪ್ರಪಂಚದ ಭೂಪಟದಲ್ಲಿ ಮೈಸೂರು ಕ್ಷೇತ್ರವನ್ನು ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ನುಡಿದರು ರಾಜ ಮನೆತನದಿಂದ ಬಂದ ನೀವು
 ರಾಜಕೀಯವಾಗಿ ನಿಮ್ಮ ಮುಂದೆ ಬಂದಿರುವ ಸವಾಲುಗಳೇನು ? ಪ್ರತಾಪ್ ಸಿಂಹರವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅವರು ಈಗ ಟಿಕೆಟ್ ವಂಚಿತರಾಗಿದ್ದು ನಿಮಗೆ ಅವರಿಂದ ವ್ಯತಿರಿಕ್ತ ಪರಿಣಾಮ ಬೀರುವುದೇ?  ಪಿರಿಯಾಪಟ್ಟಣ ತಂಬಾಕು ಬೆಳೆಗೆ ಪ್ರಸಿದ್ಧಿಯಾಗಿದ್ದು ಈ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ನಿಮ್ಮ ಕೊಡುಗೆ ಏನು? ಎಸಿ ಕೋಣೆಯಲ್ಲಿ ಇದ್ದ ನೀವು ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಪೆÇಲೀಸ್ ಠಾಣೆಗೂ ಸಹ ಬಂದು ಅವರ ಕಷ್ಟಗಳಿಗೆ ಸ್ಪಂದಿಸಬೇಕು ಇದು ನಿಮ್ಮಿಂದ ಸಾಧ್ಯವೇ? ಎಂಬಿತ್ತ್ಯಾದಿ ಪತ್ರಕರ್ತರ ಪ್ರಶ್ನೆಗೆ ಸಾವಧಾನವಾಗಿ ಉತ್ತರಿಸಿದ ಎದುವೀರ್ ನಿಮ್ಮ ಪ್ರಶ್ನೆ ನಿಮಗೆ ಹೆಚ್ಚಿನ ಸವಾಲು ಎಂಬುದಾಗಿ ಕಾಣಬಹುದು ಆದರೆ ನಾನು ಜನಪ್ರತಿನಿಧಿಯಾಗಿ ಮುಂದಿನ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ನಿಮ್ಮೆಲ್ಲರ ಸಹಕಾರದಿಂದ ಎದುರಿಸಲು ಸಿದ್ಧನಾಗಿದ್ದೇನೆ ಇದಕ್ಕೆ ನಿಮ್ಮೆಲ್ಲರ ಹಾಗೂ ಕಾರ್ಯಕರ್ತರ  ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ ಕಾರ್ಯದರ್ಶಿ ಚೆನ್ನಬಸವರಾಜ್ ಶಾಸಕ ರಾಮದಾಸ್ ಮುಖಂಡರುಗಳಾದ  ಎಚ್ ಸಿ ಬಸವರಾಜ್.ಪ್ರಶಾಂತ್ ಗೌಡ.ಮೈವಿ ರವಿಶಂಕರ್.ಕೌಲನಹಳ್ಳಿ ಸೋಮಶೇಖರ್ .ರಾಜೇಗೌಡ.ವಿಕ್ರಂ ರಾಜ್ .ಆರ್ ಟಿ ಸತೀಶ್.ನಳಿನಿ ಗೌಡ ಶುಭ ಗೌಡ.ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು