ರಾಜಮನೆತನಕ್ಕೆ ಒಲಿದ ಗ್ರಾ ಪಂ ಅಧ್ಯಕ್ಷ ಸ್ಥಾನ

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 20 :- ತಾಲೂಕಿನ ಜರ್ಮಲಿ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಜರ್ಮಲಿ ಪಾಳೇಗಾರ ಮನೆತನದ ಸಿದ್ದಪ್ಪನಾಯಕ, ಉಪಾಧ್ಯಕ್ಷೆಯಾಗಿ ಹರವದಿ ಓಬಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಚುನಾವಣಾಧಿಕಾರಿಯಾಗಿದ್ದ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ಇಂದು ಮಧ್ಯಾಹ್ನ ಘೋಷಿಸಿದ್ದಾರೆ.
ಜರ್ಮಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಈ ಹಿಂದೆ ಇದ್ದ ಅಧ್ಯಕ್ಷ ಬಸವರಾಜ್ ಹಾಗೂ ಮಲ್ಲಮ್ಮ ಇವರುಗಳು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ದಿನಾಂಕ ನಿಗಧಿಯಾಗಿತ್ತು ಕೂಡ್ಲಿಗಿ ತಹಸೀಲ್ದಾರ್ ಚುನಾವಣಾ ಪ್ರಕ್ರಿಯೆ ನಡೆಸಲಾಗಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಸ್ಥಾನಗಳಿಗೆ 13 ಜನ ಸದಸ್ಯರ ಬಲಾಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜರ್ಮಲಿ ಪಾಳೇಗಾರ ರಾಜವಂಶಸ್ಥ  ಸಿದ್ದಪ್ಪನಾಯಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರವದಿ ಓಬಮ್ಮ ಇವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರ ಅವಿರೋಧ ಆಯ್ಕೆಯನ್ನು ಕೂಡ್ಲಿಗಿ ತಹಸೀಲ್ದಾರ್ ಜಗದೀಶ್ ಘೋಷಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಸಹಾಯಕರಾಗಿ ಶಿರಸ್ತೇದಾರ್ ಈಶಪ್ಪ , ಸಿಬ್ಬಂದಿ ಶಿವಕುಮಾರ್ ಹಾಗೂ ವಾಸು, ಪಿಡಿಒ ಹಾಗೂ ಇತರರು ಉಪಸ್ಥಿತರಿದ್ದರು.

Attachments area