ರಾಜನ್ ಅಮಾನತು, ಖರ್ಗೆ ಖಂಡನೆ

ನವದೆಹಲಿ,ಆ. ೧೧-ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಾಜನ್ ಚೌಧರಿ ಅವರನ್ನು ಅಮಾನತುಗೊಳಿಸಿರುವ ಕ್ರಮ ‘ಪ್ರಜಾಪ್ರಭುತ್ವ ವಿರೋಧಿ’ ಮತ್ತು ‘ದುರದೃಷ್ಟಕರ’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಕಲಾಪ ಆರಂಭ ಆರಂಭವಾದಾಗ ದುರಹಂಕಾರ, ಹಠಮಾರಿತನ ಬದಿಗೆ ಸರಿಸಿ ಹೊರಹಾಕಿದ್ದರೆ, ಸಂಸತ್ತಿನ ಅಮೂಲ್ಯ ಸಮಯವನ್ನು ಉಳಿಸಬಹುದಿತ್ತು ಎಂದು ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ದುರಹಂಕಾರದಿಂದ ತಾವು ಹೇಗೆ ನಡೆದುಕೊಂಡರೂ ವಿರೋದ ಪಕ್ಷಗಳು ಸುಮ್ಮನಿರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾವಿಸಿದ್ದಾರೆ ಇದು ಅಂತ್ಯಂತ ದುರುದ್ದೇಶ. ಹೀಗಾಗಿ ಪ್ರಜಾಪ್ರಭುತ್ವ ರಕ್ಷಿಸಲು ನೆರವಾಗಿ ಎಂದು ಮನವಿ ಸಭಾಪತಿಗಳಿಗೆ ಮನವಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತ್ತು ಮಾಡಿರುವ ವಿಷಯ ಪ್ರಸ್ತಾಪ ಮಾಡಿ ಪದೇ ಪದೇ ವಿರೋದ ಪಕ್ಷಗಳ ಸದಸ್ಯರನ್ನು ಅಮಾನತ್ತು ಮಾಡುವುದು ಖಂಡನೀಯ ಎಂದಿದ್ದಾರೆ. ಈ ರೀತಿಯ ಕೇಂದ್ರ ಸರ್ಕಾರದ ನಡೆ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವ ಎರಡಕ್ಕೂ ಬಹಳ ಮಾರಕ ಎಂದು ಸಾಬೀತುಪಡಿಸುತ್ತದೆ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದ್ದಾರೆ. ಚುನಾವಣಾ ಭಾಷಣ: ಮಣಿಪುರದ ಹಿಂಸಾಚಾರ ಪ್ರಕರಣವನ್ನು ಹತ್ತಿಕ್ಕಿ ಶಾಂತಿ ಕಾಪಾಡಲು ಆದ್ಯತೆ ನೀಡುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸದ ಚರ್ಚೆಯ ಉತ್ತರವನ್ನು ಚುನಾವಣಾ ಭಾಷಣ ಮಾಡಿಕೊಂಡಿದ್ದರು ಎಂದು ದೂರಿದ್ದಾರೆ. ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗೆ ಉತ್ತರ ನೀಡದೆ ಚುನಾವಣಾ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ವಿರೋದಿಸಿ, ನೀರವ್ ಮೋದಿ ಎಂದಿದ್ದಾರೆ. ಅದಕ್ಕೆ ಅವರನ್ನು ಅಮಾನತ್ತು ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ನೀರವ್ ಎಂದರೆ ಮೌನ, ಸ್ತಬ್ದ ಎಂದು ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಸಭಾಪತಿಳು ಹಾಗು ಉಪ ರಾಷ್ಟ್ರಪತಿಯಾಗಿ ಸಂವಿದಾನ ರಕ್ಷಣೆ ಮಾಡಲು ನಮ್ಮ ನೆರವಿಗೆ ಬನ್ನಿ ಎಂದಿದ್ದಾರೆ. “ಧನ್ಯವಾದ ಪ್ರಧಾನಮಂತ್ರಿ, ಕೊನೆಗೆ ನೀವು ಮಣಿಪುರ ಹಿಂಸಾಚಾರದ ಕುರಿತು ಸದನದಲ್ಲಿ ಮಾತನಾಡಿದ್ದೀರಿ. ನಿಮ್ಮ ಹಠಮಾರಿತನ, ದುರಂಹಕಾರವನ್ನು ತ್ಯಜಿಸಿದ್ದರೆ ನೂರಾರು ಮಂದಿ ಸಾವನ್ನಪ್ಪುವುದು ತಪ್ಪುತ್ತಿತ್ತು ಎಂದಿದ್ದಾರೆ.