ರಾಜಧಾನಿಯಲ್ಲಿ 5,811 ಸೋಂಕು ಧೃಢ

ಬೆಂಗಳೂರು, ಮೇ ೨೮- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯೂ ಲಾಕ್ ಡೌನ್ ಬಳಿಕ ಕಡಿಮೆಯಾಗುತ್ತಿದ್ದು, ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ೫,೮೧೧ ಕೋವಿಡ್? ಸೋಂಕಿನ ಪ್ರಕರಣ ದೃಢಪಟ್ಟಿದೆ.
ನಗರದ ಮಹಾದೇವಪುರ ವಲಯದಲ್ಲಿ ೯೩೮, ಪೂರ್ವ ವಲಯದಲ್ಲಿ ಪೂರ್ವ- ೬೭೧, ಬೊಮ್ಮನಹಳ್ಳಿಯಲ್ಲಿ- ೪೯೬, ದಾಸರಹಳ್ಳಿ- ೧೮೬, ಬೆಂಗಳೂರು ಆರ್‌ಆರ್ ನಗರ- ೪೩೦, ಬೆಂಗಳೂರು ದಕ್ಷಿಣ- ೫೩೪, ಬೆಂಗಳೂರು ಪಶ್ಚಿಮ- ೪೨೮, ಯಲಹಂಕ- ೪೯೩, ಹೊರವಲಯದ ತಾಲೂಕುಗಳಲ್ಲಿ ೪೫೫ ಜನರಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಶುಕ್ರವಾರ ದೃಢಪಟ್ಟ ೫,೮೧೧ ಕೋವಿಡ್? ಸೋಂಕಿತರ ಪೈಕಿ ಒಟ್ಟು ೬೧೧ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ಇನ್ನು, ಕಳೆದ ೨೪ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ೫,೯೪೯ ಪ್ರಕರಣಗಳು ಪತ್ತೆಯಾಗಿ, ೨೭೩ ಮಂದಿ ಮೃತಪಟ್ಟಿದ್ದರು. ಸದ್ಯ ೨,೦೬,೩೯೦ ಸಕ್ರಿಯ ಪ್ರಕರಣಗಳಿವೆ.

ನಗರದ ವಿವಿಧ ಪ್ರದೇಶಗಳಲ್ಲಿ ನಿನ್ನೆ ೫೩,೦೯೮ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವ್ ಪ್ರಮಾಣ ಶೇ. ೨೯.೧೭ಕ್ಕೆ ಇಳಿಕೆಯಾಗಿದೆ. ಮರಣ ಪ್ರಮಾಣ ಶೇ೧.೬೦ರಷ್ಟಿದೆ ಎಂದು ಪಾಲಿಕೆ ತಿಳಿಸಿದೆ.