ರಾಜಧಾನಿಯಲ್ಲಿ 4 ಸಾವಿರ ಸೋಂಕು ದೃಢ

ಬೆಂಗಳೂರು, ಜೂ.೨- ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಏರಿಳಿತ ಮುಂದುವರೆದಿದ್ದು, ಬುಧವಾರ ೪೧೩೮ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದ ಮಹಾದೇವಪುರ ೫೭೯, ಬೊಮ್ಮನಹಳ್ಳಿಯಲ್ಲಿ ೪೭೮ ದಾಸರಹಳ್ಳಿ ೧೩೦, ಬೆಂಗಳೂರು ಪೂರ್ವ ೪೯೩ , ಆರ್‌ಆರ್ ನಗರ ೩೨೮ , ಬೆಂಗಳೂರು ದಕ್ಷಿಣ ೩೨೨, ಬೆಂಗಳೂರು ಪಶ್ಚಿಮ ೩೨೬, ಯಲಹಂಕ ೨೯೪ ಸೇರಿದಂತೆ ಒಟ್ಟು ೪೧೩೮ ಹೊಸದಾಗಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇನ್ನೂ, ಕಳೆದ ೨೪ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ೩,೭೩೪ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೬೬,೬೪೭ಕ್ಕೆ ಏರಿಕೆಯಾಗಿತ್ತು.ಜತೆಗೆ ನಗರದಲ್ಲಿ ಸೋಂಕಿಗೆ ೨೭೬ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮತ್ತೊಂದೆಡೆ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ ೧೫,೩೦೪ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೨,೯೮,೨೯೯ಕ್ಕೆ ಇಳಿಕೆಯಾಗಿದೆ. ಇದರಿಂದ ಪಾಸಿಟಿವಿಟಿ ಪ್ರಮಾಣ ಶೇ.೧೨.೩೦ಕ್ಕೆ ಇಳಿಕೆಯಾಗಿದೆ.