ರಾಜಧಾನಿಯಲ್ಲಿ ಸೋಂಕು ಇಳಿಕೆ

ಬೆಂಗಳೂರು, ಮೇ.೩೧-ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ವೇಗ ತಗ್ಗುತ್ತಿದ್ದು, ಸೋಮವಾರ ಮಧ್ಯಾಹ್ನ ಸುಮಾರಿಗೆ ೪,೦೪೬ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ನಗರದ ಮಹಾದೇವಪುರ ೭೦೩, ಬೊಮ್ಮನಹಳ್ಳಿ ೪೧೧, ದಾಸರಹಳ್ಳಿ ೧೨೦, ಪೂರ್ವವಲಯ ೪೪೮, ಆರ್‌ಆರ್ ನಗರ ೩೪೮, ದಕ್ಷಿಣವಲಯ ೨೯೧, ಪಶ್ಚಿಮ ವಲಯ ೩೪೯, ಯಲಹಂಕದಲ್ಲಿ ೩೫೪ ಜನರಿಗೆ ಸೋಂಕು ತಗುಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಇದಕ್ಕೆ ಲಾಕ್‌ಡೌನ್ ನಿರ್ಬಂಧಗಳೇ ಕಾರಣ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಕಳೆದ ೨೪ ಗಂಟೆಗಳಲ್ಲಿ ನಗರದಲ್ಲಿ ೪,೭೩೪ ಕೋವಿಡ್ ಪಾಟಿಸಿವ್ ಪ್ರಕರಣಗಳು ಪತ್ತೆಯಾಗಿತ್ತು. ೨೧೩ ಮಂದಿ ಮೃತಪಟ್ಟಿದ್ದರು.
ಆದರೆ, ಸೋಮವಾರ ೬೮೮ ಪ್ರಕರಣಗಳು ಇಳಿಕೆ ಖಂಡಿವೆ.ಸದ್ಯ ರಾಜಧಾನಿಯಲ್ಲಿ ೧,೬೨,೬೨೫ ಸಕ್ರಿಯ ಪ್ರಕರಣಗಳಿವೆ. ಎರಡು ದಿನಗಳ ಹಿಂದೆ ೫೪,೬೯೦ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಅಧಿಕೃತ ಮೂಲಗಳು ತಿಳಿಸಿವೆ.