ರಾಜಧಾನಿಯಲ್ಲಿ ಸೋಂಕು ಇಳಿಕೆ

ಬೆಂಗಳೂರು, ಮೇ.೨೭- ರಾಜಧಾನಿ ಬೆಂಗಳೂರಿನಲ್ಲಿ ಸತತ ಹತ್ತು ದಿನಗಳಿಂದ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಗುರುವಾರ ಮಧ್ಯಾಹ್ನ ಸುಮಾರಿಗೆ ೫,೯೭೭ ಜನರಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ನಗರದ ಮಹಾದೇವಪುರ-೯೮೭, ಬೊಮ್ಮನಹಳ್ಳಿಯಲ್ಲಿ-೫೪೭, ದಾಸರಹಳ್ಳಿ-೨೧೫, ಬೆಂಗಳೂರು ಪೂರ್ವ-೭೮೩, ಆರ್‌ಆರ್ ನಗರ-೪೪೨, ಬೆಂಗಳೂರು ದಕ್ಷಿಣ-೬೧೬, ಬೆಂಗಳೂರು ಪಶ್ಚಿಮ-೪೭೯, ಯಲಹಂಕ-೪೬೪, ಹೊರವಲಯದ ತಾಲೂಕುಗಳಲ್ಲಿ ೪೪೮ ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇನ್ನು, ಕಳೆದ ೨೪ ಗಂಟೆಗಳಲ್ಲಿ ನಗರದಲ್ಲಿ ೬೪೩೩ ಪ್ರಕರಣಗಳು ಪತ್ತೆಯಾಗಿದ್ದು, ೨೮೫ ಮಂದಿ ಸೋಂಕಿತರು ಮೃತಪಟ್ಟಿದ್ದರು. ಈವರೆಗೆ ೨,೦೭,೩೫೭ ಸಕ್ರಿಯ ಪ್ರಕರಣಗಳಿವೆ. ಮೇ ೨೪ರಂದು ೫೬,೧೬೪ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ.
ಅದೇ ರೀತಿ, ಪಾಸಿಟಿವಿಟಿ ಪ್ರಮಾಣ ಶೇ. ೨೯.೯೫ರಷ್ಟಿದ್ದು, ಮರಣ ಪ್ರಮಾಣ ೧.೫೫ರಷ್ಟು ಇದೆ ಎಂದು ಬಿಬಿಎಂಪಿ ಹೇಳಿದೆ. ಇನ್ನು, ಗುರುವಾರ ದೃಢಪಟ್ಟ ಸೋಂಕಿನ ಪೈಕಿ ಒಟ್ಟು ೬೧೧ ಮಂದಿ ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.