ರಾಜಧಾನಿಯಲ್ಲಿ ತಗ್ಗಿದ ಸೋಂಕು

ಬೆಂಗಳೂರು, ಜೂ.೧೧- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ತೀವ್ರವಾಗಿ ತಗ್ಗಿದ್ದು, ಶುಕ್ರವಾರ ಬರೀ ೧,೮೮೪ ಜನರಿಗೆ ಮಾತ್ರ ಸೋಂಕು ದೃಢಪಟ್ಟಿದೆ.
ನಗರದ ಪೂರ್ವ ವಲಯ ೨೯೦, ಮಹಾದೇವಪುರ ೨೬೮, ಬೊಮ್ಮನಹಳ್ಳಿಯಲ್ಲಿ ೨೦೦, ದಾಸರಹಳ್ಳಿ ೫೭, ಆರ್‌ಆರ್‌ನಗರ ೧೪೪, ದಕ್ಷಿಣ ವಲಯ ೧೪೦, ಪಶ್ಚಿಮ ವಲಯ ೧೪೧, ಯಲಹಂಕದ ೧೩೩ ಜನರಿಗೆ ಸೋಂಕು ತಗುಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇನ್ನೂ, ಕಳೆದ ೨೪ ಗಂಟೆಗಳಲ್ಲಿ ೨,೧೯೧ ಪ್ರಕರಣ ಪತ್ತೆಯಾಗಿದ್ದವು.ಜತೆಗೆ ೪೭ ಮಂದಿ ಮೃತಪಟ್ಟಿದ್ದರು. ಈವರೆಗೆ ೯೫,೪೨೩ ಸಕ್ರಿಯ ಪ್ರಕರಣಗಳಿವೆ.

ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆ ೬,೫೭೨೬ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ೭೮,೭೧೪ ಜನರಿಗೆ ಲಸಿಕೆ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣವೂ ಶೇ. ೩.೮೨ರಷ್ಟಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ.೫.೩೮ರಷ್ಟು ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.