ರಾಜಧಾನಿಗೆ ಬಂದಿಳಿದ 1.70 ಲಕ್ಷ ಸಿರಿಂಜ್..!

ಬೆಂಗಳೂರು, ಜ.8- ಕೊರೋನಾ ಲಸಿಕೆ ಹಂಚಿಕೆ ಪ್ರಕ್ರಿಯೆ ದಿನೇ ದಿನೇ ಚುರುಕುಗೊಳ್ಳುತ್ತಿದ್ದು, ರಾಜಧಾನಿ ಬೆಂಗಳೂರಿಗೆ 1.70 ಲಕ್ಷ ಸಿರಿಂಜ್ ಬಂದಿವೆ.

ಬೆಂಗಳೂರು ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕುರಿತು ಈಗಾಗಲೇ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿರುವ ಬಿಬಿಎಂಪಿ, ಲಸಿಕೆ ತಾಲೀಮು ಸಹ ಮುಗಿಸಿದೆ.

ಇದರ ನಡುವೆ ಇದೀಗ ಲಸಿಕೆ ನೀಡಿಕೆಗೆ ಬೇಕಾದ ಸಿರಿಂಜ್‌ಗಳು ದಾಸ್ತಾನು ಕೇಂದ್ರ ತಲುಪಿವೆ. 0.5 ಎಂಎಲ್ ಎಡಿ ಸಾಮರ್ಥ್ಯದ ಒಟ್ಟು 1.70 ಲಕ್ಷ ಸಿರಿಂಜ್‌ಗಳು ದಾಸ್ತಾನು ಕೇಂದ್ರ ತಲುಪಿವೆ.

ಇನ್ನು, ನಗರದ ಪ್ರಮುಖ ದಾಸಪ್ಪ ಆಸ್ಪತ್ರೆಯಲ್ಲಿ 45 ಸಾವಿರ ಡೋಸ್‌ಗಳನ್ನು ಇಡಬಹುದಾಗಿದ್ದು, ಐಸ್‌ಲೈನ್ ರೆಫ್ರಿಜರೇಟರ್ ಗಳು ಸಿದ್ಧವಾಗಿವೆ.