ರಾಜಗೋಪುರಕ್ಕೆ ಬೆಂಕಿ ಭಕ್ತರಲ್ಲಿ ಆಂತಕ

ಚೆನ್ನೈ,ನ.೨೧-ತಮಿಳುನಾಡಿನ ವಿರುದುನಗರದ ಶಿವಕಾಶಿಯಲ್ಲಿರುವ ಭದ್ರಕಾಳಿ ಅಮ್ಮನ್ ದೇವಸ್ಥಾನದ ರಾಜಗೋಪುರಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಭಕ್ತರನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಭದ್ರಕಾಳಿ ಅಮ್ಮನ್ ದೇವಸ್ಥಾನದ ರಾಜಗೋಪುರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.

ಗೋಪುರದ ನವೀಕರಣ ಕಾರ್ಯ ನಡೆಯುತ್ತಿದ್ದು, ಅದನ್ನು ಮರದ ಚೌಕಟ್ಟಿನಿಂದ ಮುಚ್ಚಲಾಗಿತ್ತು. ಅದಕ್ಕೆ ಬೆಂಕಿ ತಾಗಿ ದೇವಾಲಯದ ಗೋಪುರದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದು ತಿಳಿದು ಬಂದಿದೆ.

ಭಕ್ತರು ಗೋಪುರಕ್ಕೆ ಬೆಂಕಿ ಬಿದ್ದಿರುವುದನ್ನು ಕಂಡು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಇದರಿಂದ ಭಕ್ತರು ನಿಟ್ಟಿಸಿರು ಬಿಟ್ಟಿದ್ದಾರೆ.

ಮದುವೆಯ ಮೆರವಣಿಗೆಯ ಅಂಗವಾಗಿ ಸಿಡಿಸಲಾದ ಪಟಾಕಿಗಳು ಬೆಂಕಿಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಿವಕಾಶಿ ಪೊಲೀಸರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.