ರಾಜಗೋಪಾಲ್ ರೆಡ್ಡಿ ಫೌಂಡೇಷನ್‌ನಿಂದ ಮಕ್ಕಳಿಗೆ ಪುಸ್ತಕ ವಿತರಣೆ

ಸಿರವಾರ.ನ೦೯: ಬೆಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡರಾದ ಪಿ.ಹೆಚ್ ರಾಜಗೋಪಾಲ್ ರೆಡ್ಡಿ ಫೌಂಡೇಷನ್‌ನಿಂದ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು.
ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದ ನೀಲಮ್ಮ ಕಾಲೋನಿಯ ೧೦೦ ಮಕ್ಕಳಿಗೆ ಮಕ್ಕಳಿಗೆ ಪಟಾಕಿ ನೀಡುವುದಕ್ಕಿಂತ ಪುಸ್ತಕವನ್ನು ನೀಡಬೇಕು ಎನ್ನುವ ಡಾ||ಬಾಬಾ ಸಾಹೇಬ್ ಅಂಬೇಡಕರ್ ಅವರ ಮಾತಿನಂತೆ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಎಂ.ಆರ್ ಮೊಹಮ್ಮದ್ ರಫಿ, ನವೀನ್ ಕುಮಾರ, ಭೀಮೇಶ, ಅಬ್ದುಲ್ ಘನಿ, ಸುಲ್ತಾನ ಅಲಿ, ಮಹಿಬೂಬ್, ಪ್ರಜ್ವಲ್ ಸೇರಿದಂತೆ ಯುವಕರು ಇದ್ದರು.