ರಾಜಕುಮಾರ ಹರಳಯ್ಯಗೆ ಪಿ.ಎಚ್‍ಡಿ

ಕಲಬುರಗಿ:ಅ.31:ಆಳಂದನ ಪಿಎಸ್‍ಆರ್‍ಎಂಎಸ್ ಬಿ.ಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜಕುಮಾರ ಹರಳಯ್ಯ ಅವರು ಶಿಕ್ಷಣಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಉತ್ತರಪ್ರದೇಶದ ಕಾನ್ಪೂರನ ಛತ್ರಪತಿ ಶಾಹುಜೀ ಮಹಾರಾಜ ವಿಶ್ವವಿದ್ಯಾಲಯ ಪಿ.ಎಚ್‍ಡಿ ಪದವಿ ನೀಡಿದೆ.
ಇವರು ‘ ಎ ಕ್ರಿಟಿಕಲ್ ಸ್ಟಡಿ ಆನ್ ದ್ ಫ್ಯಾಕ್ಟರ್ಸ್ ಅಫೆಕ್ಟಿಂಗ್ ಆನ್ ಇಂಗ್ಲೀಷ್ ಅಚೀವಮೆಂಟ್ ಆಫ್ ದಿ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ್ ಆಫ್ ಕರ್ನಾಟಕ ಸ್ಟೇಟ್’ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರಿಗೆ ಡಾ. ಕೆ ಪ್ರಭಾಕರರಾವ ಮಾರ್ಗದರ್ಶಕರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.