ರಾಜಕುಮಾರ್ ಲರ್ನಿಂಗ್ ಅಕಾಡೆಮಿ ಪ್ರತಿಭಾ ಪರೀಕ್ಷೆಯಲ್ಲಿ ಗಣಿನಾಡ ವಿದ್ಯಾರ್ಥಿ ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜು 23 : ರಾಜ್ ಕುಮಾರ್ ಲರ್ನಿಂಗ್ ಅಕಾಡಮಿಯಿಂದ ಜರುಗಿದ ರಾಜ್ಯಮಟ್ಟದ ಪ್ರತಿಭಾ ಪರೀಕ್ಷೆಯಲ್ಲಿ ಗಣಿನಾಡಿನ ವೀ.ವಿ.ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.

ರಾಜಕುಮಾರ್ ಲರ್ನಿಂಗ್ ಅಕಾಡೆಮಿ ರಾಯಭಾರಿ ಅನುಶ್ರೀ ಹಾಗು ಗುರು ರಾಘವೇಂದ್ರ ರಾಜಕುಮಾರ್ .
ಇಂದು ಬೆಳಗ್ಗೆ ಕಾಲೇಜಿಗೆ ಆಗಮಿಸಿ ಆಯ್ಕೆಯಾದ ವಿದ್ಯಾರ್ಥಿ ಬಿ. ಕಾರ್ತಿಕ್ ಗೆ ಇಂದು ಅಕಾಡಮಿಯಿಂದ ಟ್ಯಾಬ್ ಹಾಗು ನಗುದು ಬಹುಮಾನ ವಿತರಿಸಿದರು.

ಗುರು ರಾಘವೇಂದ್ರ ರಾಜಕುಮಾರ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣದ ಮೌಲ್ಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಚಾರ್ಯಯ ಎ.ಎಂ.ಪಿ ವೀರೇಶಸ್ವಾಮಿ ಸಿಬ್ಬಂದಿವರ್ಗದವರು ಹಾಜರಿದ್ದರು .

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಾಗಿ ಪ್ರತಿಭೆ ಮೆರೆದ ವಿದ್ಯಾರ್ಥಿಗಳಿಗೆ ಅಕಾಡೆಮಿ ಯಿಂದ ಬಹುಮಾನ ನೀಡಿದರು.

ಅಕಾಡೆಮಿ ಪ್ರಶಸ್ತಿ ಪಡೆದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಳುಬೆಂಚಿ ರಾಜಶೇಖರ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.